ನೆರಿಯದ ಒಂದೂವರೆ ತಿಂಗಳ ಮಗು ಸರಕಾರಿ ಆಸ್ಪತ್ರೆಯಲ್ಲಿ ಸಾವು: ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ ಭೇಟಿ, ತನಿಖೆಗೆ ಒತ್ತಾಯ

0

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ವೈದ್ಯರು ಇಲ್ಲದ ವೇಳೆ ನರ್ಸ್ ಗಳು ಆರೈಕೆ ಮಾಡಿರುವುದರಿಂದ ಒಂದೂವರೆ ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದಾರೆ.
ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ ಒಂದೂವರೆ ತಿಂಗಳು ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಘಟನೆ ಆ.8ರಂದು ನಡೆದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ, ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ ಗೆ ದೂರವಾಣಿ ಕರೆ ಮಾಡಿ ವಿಷಯವನ್ನು ತಿಳಿಸಿ ಯಾರಿಂದ ತೊಂದರೆ ಆಗಿದೆಯೋ ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಗುವನ್ನು ತಾಯಿ ಸವಿತಾ ನೆರಿಯದ ತನ್ನ ಅಕ್ಕ ಲೀಲಾವತಿ ಅವರ ಮನೆಯಲ್ಲಿದ್ದುಕೊಂಡು ಆರೈಕೆ ಮಾಡಿಕೊಂಡಿದ್ದರು.ಆಗಸ್ಟ್ 8 ರಂದು ಮಗುವಿಗೆ ಕಫ ಆಗಿತ್ತು ಎಂದು ಬೆಳಿಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಕ್ಕಳ ವೈದ್ಯರು ಮತ್ತು ದಾದಿಯರು ಸರಿಯಾಗಿ ಆರೈಕೆ ಮಾಡದಿರುವುದರಿಂದ ಮಗು ಸಾವನ್ನಪ್ಪಿದೆ ಎಂದು ಮಗುವಿನ ಮನೆಯವರು ಆರೋಪಿಸಿದ್ದಾರೆ.

ಕರ್ತವ್ಯ ನಿರ್ವಹಿಸಿದ ಮಕ್ಕಳ ತಜ್ಞೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಹೋಗಲು ತಿಳಿಸಿದರು.ಮಗುವನ್ನು ಕರೆದುಕೊಂಡು ಬಂದ ಪೋಷಕರು ಇಲ್ಲಿಯೇ ಆರೈಕೆ ಮಾಡಿ ಎಂದು ತಿಳಿಸಿದರಿಂದ ಮಗುವಿಗೆ ಅಲ್ಲಿಯೇ ಚಿಕಿತ್ಸೆ ನೀಡಿದರು.ಮಗುವಿಗೆ ಶ್ವಾಸಕೋಶದ ತೊಂದರೆ ಇದ್ದುದರಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here