ಬಾರ್ಯ ಗ್ರಾ.ಪಂ ಅಧ್ಯಕ್ಷರಾಗಿ ಪಿ.ಕೆ.ಉಸ್ಮಾನ್, ಉಪಾಧ್ಯಕ್ಷರಾಗಿ ಯಶೋಧ ವೈ ಅವಿರೋಧವಾಗಿ ಆಯ್ಕೆ

0

ಬಾರ್ಯ: ಗ್ರಾ.ಪಂ.ಮುಂದಿನ ಎರಡೂವರೆ ವರ್ಷಗಳಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಕೆ.ಉಸ್ಮಾನ್ ಹಾಗೂ ಬಿಜೆಪಿ ಬೆಂಬಲಿತ ವಸಂತ ಬೊಲ್ಡೆಲ್ ಅಧ್ಯಕ್ಷ ಸ್ಥಾನದ ಅಂತಿಮ ಕಣದಲ್ಲಿದ್ದು ಕಾಂಗ್ರೆಸ್ ಬೆಂಬಲಿತ ಪಿ.ಕೆ.ಉಸ್ಮಾನ್ ಅವರು 14 ಮತಗಳಿಂದ ಜಯಭೇರಿಯಾಗಿದ್ದಾರೆ ಬಿಜೆಪಿ ಬೆಂಬಲಿತ ವಸಂತ ಬೊಲ್ಡೆಲ್ ಅವರು 4 ಮತಗಳನ್ನು ಪಡೆದಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಾಧ್ಯಕ್ಷರಾಗಿ ಯಶೋಧ ವೈ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ನಿರ್ವಹಿಸಿದರು.ಉಪ ಚುನಾವಣಾಧಿಕಾರಿ ಬಾರ್ಯ ಗ್ರಾ.ಪಂ.ಪಿಡಿಓ ಸುಶೀಲಾ ಸಹಕರಿಸಿದರು.ಕಾರ್ಯದರ್ಶಿ ಶೀಲಾ ಎಸ್ ಸಹಕರಿಸಿದರು.

LEAVE A REPLY

Please enter your comment!
Please enter your name here