ಪೈಪೋಟಿ, ಗೊಂದಲಗಳ ನಡುವೆ ನೆರಿಯ ಗ್ರಾ.ಪಂ ಅಧ್ಯಕ್ಷರಾಗಿ ವಸಂತಿ ಮತ್ತು ಉಪಾಧ್ಯಕ್ಷರಾಗಿ ಸಜಿತಾ ಅವಿರೋಧ ಆಯ್ಕೆ

0

ನೆರಿಯ: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಗೊಂದಲಗಳ ನಡುವೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಹಾಲಿ ಅಧ್ಯಕ್ಷೆ ವಸಂತಿ ಹಾಗೂ ಹೂವಯ್ಯ ಗೌಡ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಬಿ.ಅಶ್ರಫ್ ನಾಮಪತ್ರ ಸಲ್ಲಿಸಿದ್ದರು.ನಂತರ ಹೂವಯ್ಯ ಗೌಡರವರು ನಾಮಪತ್ರ ಹಿಂತೆಗೆದುಕೊಂಡಾಗ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಅಶ್ರಫ್ ಕೂಡ ನಾಮಪತ್ರ ಹಿಂತೆಗೆದುಕೊಂಡರು.ಈ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಹಾಲಿ ಅಧ್ಯಕ್ಷೆ ವಸಂತಿ ಅವಿರೋಧವಾಗಿ ಆಯ್ಕೆಯಾಗಿ ಮತ್ತೆ ಅಧ್ಯಕ್ಷರಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಹಾಕಿದ್ದ ನಾಮಪತ್ರ ಹಿಂತೆಗೆದುಕೊಂಡ ಮರಿಯಮ್ಮ ಬೇಸರ ವ್ಯಕ್ತಪಡಿಸಿದರು.ಪಕ್ಷದ ನಿರ್ಧಾರದಿಂದ ಮರಿಯಮ್ಮ ನಾಮಪತ್ರ ಹಿಂತೆಗೆದುಕೊಂಡ ಕಾರಣ ಸಜಿತಾರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

p>

LEAVE A REPLY

Please enter your comment!
Please enter your name here