ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಗಿರಿಜ, ಉಪಾಧ್ಯಕ್ಷರಾಗಿ ಮಂಜುನಾಥ್ ಹೆಚ್ ಅವಿರೋಧವಾಗಿ ಆಯ್ಕೆ

0

ಕಳೆಂಜ: ಪಂಚಾಯತ್ ಅಧ್ಯಕ್ಷ ಸ್ಥಾನ ವಾರ್ಡ್ ನಂಬರ್ 1ರ ಸದಸ್ಯೆ ಗಿರಿಜ ಮತ್ತು ವಾರ್ಡ್ ನಂಬರ್ 1ರ ಸದಸ್ಯ ಮಂಜುನಾಥ್ ಹೆಚ್. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಹಾಗೂ ಇವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ.ಕೆ ಹಾಗೂ ಹೊನ್ನಪ್ಪ ಗೌಡ ಎಂ ಸಹಕರಿಸಿದರು.

ತದನಂತರ ನಡೆದ ಸಭೆಯಲ್ಲಿ ಕಳೆದ ಬಾರಿಯ ಅಧ್ಯಕ್ಷರು ಆದ ಪ್ರಸನ್ನ ಎ ಪಿ ಅವರು ತನ್ನ ಹಿಂದಿನ ಕೆಲಸ ಕಾರ್ಯದ ಅನುಭವ ಹಂಚಿಕೊಂಡು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭಕೋರಿದರು.

ಸ್ಥಳದಲ್ಲಿ ಬಿಜೆಪಿಯ ಹಿರಿಯರಾದ ಸೀತಾರಾಂ ಧನಂಜಯ್ ಹಾಗೂ ಅನೇಕ ಹಿರಿಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರಾದ ನಿತ್ಯಾನಂದ ಟಿ ಎಸ್ (ಕಾಂಗ್ರೆಸ್) ಪ್ರೇಮಾ ಬಿ ಎಸ್ (ಕಾಂಗ್ರೆಸ್) ಉಪಸ್ಥಿತರಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭಕೋರಿದರು.

LEAVE A REPLY

Please enter your comment!
Please enter your name here