ತುಳು ಭಾಷಾ ವಿಷಯ ಪರೀಕ್ಷೆಯಲ್ಲಿ ವಾಣಿ ಆ.ಮಾ.ಶಾಲೆಯ ವಿದ್ಯಾರ್ಥಿಗಳ ಸಾಧನೆ

0

ಬೆಳ್ತಂಗಡಿ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನನ್ಯ, ಅನೀಶ್,ಹರ್ಷಿಕ್ ಬಿ.ಕೆ‌.,ಮೋಕ್ಷಿತ್, ನಿಗಮ್ ಕೆ.ಎನ್, ಪ್ರೇಮ್ ಕುಮಾರ್, ಸೃಜನ್, ಸುಮಿತ್,ತುನುಶ್ರೀ, ಉದಿತ್ ಮತ್ತು ವೀಕ್ಷ ವಿ.ಎಮ್ ಇವರು ತುಳು ಭಾಷೆಯಲ್ಲಿ 100 ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಇವರ ಈ ಸಾಧನೆಗೆ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಆ.6 ರಂದು ನಡೆದ ತುಳು ಭಾಷಾ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಇವರಿಗೆ ಸನ್ಮಾನಿಸಿ ನಗದು ಪುರಸ್ಕಾರವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here