ಪಟ್ರಮೆ ಪಂಚಾಯತ್ ಅಧ್ಯಕ್ಷರಾಗಿ ಮನೋಜ್ ಕುಮಾರ್, ಉಪಾಧ್ಯಕ್ಷರಾಗಿ ಮೋಹಿನಿ ಅವಿರೋಧವಾಗಿ ಆಯ್ಕೆ

0

ಪಟ್ರಮೆ: ಪಂಚಾಯತ್ ಅಧ್ಯಕ್ಷ ಸ್ಥಾನ ವಾರ್ಡ್ ನಂಬರ್ 207ರ ಸದಸ್ಯ ಮನೋಜ್ ಕುಮಾರ್ ಮತ್ತು ವಾರ್ಡ್ ನಂಬರ್ 208 ರ ಸದಸ್ಯೆ ಕಳೆದ ಅವಧಿಯ ಅಧ್ಯಕ್ಷೆ ಮೋಹಿನಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಹಾಗೂ ಇವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ಸಹಕರಿಸಿದರು.

ತದನಂತರ ಕಳೆದ ಬಾರಿಯ ಅಧ್ಯಕ್ಷರಾಗಿದ್ದ ಮೋಹಿನಿ ಹಾಗೂ ಉಪಾಧ್ಯಕ್ಷರಾಗಿದ್ದ ಯತೀಶ್ ಕುಮಾರ್ ಅವರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ಹಾಗೂ ಪಂಚಾಯತ್ ನ ಇತರ ಸಿಬ್ಬಂದಿಗಳು ಗೌರವಿಸಿದರು.

ಸ್ಥಳದಲ್ಲಿ ಬಿಜೆಪಿಯ ಅನೇಕ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here