ಕಡಿರುದ್ಯಾವರ ಪಂಚಾಯತ್ ಉಪಾಧ್ಯಕ್ಷರಾಗಿ ಬಂಡಾಯವಾಗಿ ನಿಂತ ಸಾವಿತ್ರಿಗೆ ಗೆಲುವು-ಚುನಾವಣೆಯಲ್ಲಿ ಸಮಬಲ-ಚೀಟಿಯ ಮೂಲಕ ಗೆಲುವು: ಅಧ್ಯಕ್ಷರಾಗಿ ರತ್ನಾವತಿ ಬಾಲಕೃಷ್ಣ ಗೌಡ ಅವಿರೋಧ ಆಯ್ಕೆ

0

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸ್ಥಾನಕ್ಕೆ ಏಕಾಏಕಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗುರುಪ್ರಸಾದ್ ಮತ್ತು ಸಾವಿತ್ರಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಪಕ್ಷದ ಪರವಾಗಿ ಗುರುಪ್ರಸಾದ್ ರವರ ಹೆಸರು ಸೂಚಿಸಲಾಗಿತ್ತು, ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಬಂಡಾಯವಾಗಿ ಸಾವಿತ್ರಿ ನಾಮಪತ್ರ ಸಲ್ಲಿಸಿದರು.

9 ಜನ ಸದಸ್ಯರಿದ್ದ ಗ್ರಾಮ ಪಂಚಾಯತ್ ನಲ್ಲಿ ಚುನಾವಣೆಗೆ ಎಂಟು ಸದಸ್ಯರು ಹಾಜರಿದ್ದರು. ಚುನಾವಣೆಯಲ್ಲಿ ಗುರುಪ್ರಸಾದ್ ಮತ್ತು ಸಾವಿತ್ರಿ ಇಬ್ಬರಿಗೂ ತಲಾ ನಾಲ್ಕು ಮತಗಳು ಚಲಾವಣೆಯಾದವು.ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಮಂಜನಾಯ್ಕರವರು ಅದೃಷ್ಟದ ಚೀಟಿ ಎತ್ತುವಾಗ ಸಾವಿತ್ರಿ ವಿಜಯಿಯಾದರು. ಈ ಮೂಲಕ ಬಂಡಾಯವಾಗಿ ಸ್ಪರ್ಧಿಸಿದ್ದ ಸಾವಿತ್ರಿಯವರು ಗೆಲುವು ಕಂಡರು.

ಕಡಿರುದ್ಯಾವರ ಪಂಚಾಯತ್ ಅಧ್ಯಕ್ಷರಾಗಿ ರತ್ನಾವತಿ ಬಾಲಕೃಷ್ಣ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿಯಾಗಿ ಪಶು ಇಲಾಖೆಯ ಮಂಜನಾಯ್ಕರವರಿಗೆ ಪಿಡಿಒ ಜಯಕೀರ್ತಿ ಸಹಕರಿಸಿದರು.

LEAVE A REPLY

Please enter your comment!
Please enter your name here