ಕಣಿಯೂರು ಗ್ರಾಮ ಪಂಚಾಯತ್- ಅಧ್ಯಕ್ಷರಾಗಿ ಯಶವಂತ.ಎನ್, ಉಪಾಧ್ಯಕ್ಷರಾಗಿ ಜಾನಕಿ ಆಯ್ಕೆ

0

ಕಣಿಯೂರು ಇಲ್ಲಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಹಿಂದುಳಿದ ವರ್ಗ ಎ ವರ್ಗದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಶವಂತ ಎನ್ ಕಾರಿಂಜ ಬೈತಾರ್, ಹಾಗೂ ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ಮಹಿಳೆ ಜಾನಕಿ ಕಣಿಯೂರುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.7ರಂದು ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯ ಅಧಿಕಾರಿಯಾಗಿ ಬೆಳ್ತಂಗಡಿ ಸಾಮಾಜಿಕ ಅರಣ್ಯ ಇಲಾಖಾಧಿಕಾರಿ ವಿದ್ಯಾರವರು ಚುನಾವಣೆ ಪ್ರಕ್ರಿಯೆ ನಡೆಸಿದರು.ಪಂ.ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ರಮೇಶ್ ರವರು ಸಹಾಯಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here