ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮಹಾಸಭೆ ಮತ್ತು ಆಟಿಡೊಂಜಿ ದಿನ,ಹಾಗೂ ಚೆನ್ನೆಮನೆ ಗೊಬ್ಬುದ ಪಂತ ಕಾರ್ಯಕ್ರಮ ಆ.6ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜಾ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ,ಟೈಲರ್ಸ್ ಸಂಘಟನೆ ಇನ್ನಷ್ಟು ಅಭಿವೃದ್ಧಿ ಹೊಂದಲು ಸರಕಾರದ ಕಡೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಶುಭವನ್ನು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷೆ ವೇದಾವತಿ ಜನಾರ್ದನ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ ಭಾಗವಹಿಸಿ ಟೈಲರ್ಸ್ ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ಕ್ಷೇತ್ರ ಸಮಿತಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಲಿಗೋಧರ್, ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರ ಕುಲಾಲ್, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಉದಯ ಕುಮಾರ್, ಟೈಲರ್ಸ್ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗ್ರಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ ಸ್ವಾಗತಿಸಿದರು.ಹರಿಣಿ ಬೆಳ್ತಂಗಡಿ ಪ್ರಾರ್ಥನೆ ಹಾಡಿದರು.ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಉಜಿರೆ ವರದಿ ಮಂಡಿಸಿದರು.ಕೋಶಾಧಿಕಾರಿ ಜಯಾ ಚಿದಾನಂದ್ ಲೆಕ್ಕಪತ್ರ ಮಂಡಿಸಿದರು.ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೋಹನ್ ದಾಸ್ ಅಳದಂಗಡಿ ಕಾರ್ಯಕ್ರಮ ನಿರೂಪಿಸಿದರು.ಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಬಳಂಜ ಧನ್ಯವಾದ ಸಲ್ಲಿಸಿದರು.
ವಿವಿಧ ವಲಯಗಳಿಂದ ಟೈಲರ್ಸ್ ವೃತ್ತಿ ಭಾಂದವರು ತಯಾರಿಸಿ ತಂದಿದ್ದ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳನ್ನು ಸಹ ಭೋಜನದ ಜೊತೆಗೆ ಸವಿಯಲಾಯಿತು.ತುಳುನಾಡಿನ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯುಳ್ಳ ಚೆನ್ನೆಮನೆ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಒಂಬತ್ತು ವಲಯಗಳ ಹಿರಿಯ ಹಾಗೂ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಭೆಯಲ್ಲಿ ಸನ್ಮಾನಿಸಲಾಯಿತು.
ಮಹಾಸಭೆಯಲ್ಲಿ ಈ ಹಿಂದಿನ ಪದಾಧಿಕಾರಿಗಳನ್ನೇ ಮುಂದಿನ ಅವಧಿಗೆ ಪುನರಾಯ್ಕೆ ಮಾಡಲಾಯಿತು.
ಬೆಳ್ತಂಗಡಿ ವಲಯ ಸಮಿತಿಯ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್,ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷೆ ಶಾಂಭವಿ, ಪಿ.ಬಂಗೇರ, ಮಾಜಿ ಕಾರ್ಯದರ್ಶಿ ವಸಂತ ಕೋಟ್ಯಾನ್,ಸಂಘಟಕರಾದ ಹರೀಶ್,ಜಿ.ವಿ., ತಾಲೂಕು ಪಂಚಾಯತ್ ಮಾಜಿ ಸದಸ್ಯೆ ವಿನುಷಾ ಪ್ರಕಾಶ್, ವಸಂತ ಎನ್., ಶಶಿಕಲಾ ಗೋಪಾಲ್, ಜಯಾ ಕಿಲ್ಲೂರು ಹಾಗೂ ಕ್ಷೇತ್ರ ಸಮಿತಿಯ ಎಲ್ಲಾ ಪಧಾಧಿಕಾರಿಗಳು, ಎಲ್ಲಾ ವಲಯ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರು, ಮಾಜಿ ಅಧ್ಯಕ್ಷರುಗಳು ಹಾಗೂ ಟೈಲರ್ಸ್ ವೃತ್ತಿ ಭಾಂಧವರು, ಮಹಿಳೆಯರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.