

ಬೆಳ್ತಂಗಡಿ: ಯುವ ವಾಹಿನಿ ಬೆಳ್ತಂಗಡಿ ಘಟಕದ ಮಾಜಿ ನಿರ್ದೇಶಕ ದಿ.ಶಶಿಧರ ಅದೇಲು ರವರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷದಂತೆ ನೀಡುತ್ತಿರುವ ವಿದ್ಯಾನಿಧಿಯನ್ನು ಘಟಕದ ವತಿಯಿಂದ ಅವರ ಮನೆಗೆ ಆ.3 ರಂದು ಭೇಟಿ ನೀಡಿ ಅವರ ಮಕ್ಕಳಾದ ಶರಣ್ಯ ಮತ್ತು ಸಂದೀಪ್ ಇವರಿಗೆ ವಿದ್ಯಾನಿಧಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್ ಉಪಾಧ್ಯಕ್ಷ ಸದಾಶಿವ ಊರ, ಕಾರ್ಯದರ್ಶಿ ಸುನೀಲ್ ಕನ್ಯಾಡಿ,ಮಾಜಿ ಅಧ್ಯಕ್ಷ ಹರೀಶ್ ಸುವರ್ಣ ಘಟಕದ ನಿರ್ದೇಶಕ ನಾಗೇಶ್ ಅದೇಲು, ಸಲಹೆಗಾರ ರವಿ ಪೂಜಾರಿ ಅದೇಲು ಉಪಸ್ಥಿತರಿದ್ದರು.