ಸಿದ್ದಕಟ್ಟೆ: ‘ಜೈನ್ ರೆಸ್ಟೋರೆಂಟ್’ ಮಾಲಕ ಸಂದೀಪ್ ಜೈನ್ ನಾಪತ್ತೆ

0

ಪುಂಜಾಲಕಟ್ಟೆ: ಕೈ ನೋವು ಎಂದು ವೈದ್ಯರ ಬಳಿ ತೆರಳಿದ ಹೋಟೆಲ್ ಮಾಲಕ ನಾಪತ್ತೆಯಾದ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂದೀಪ್ ಜೈನ್ ಅವರು ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಲ್ ಬೆಟ್ಟು ಎಂಬಲ್ಲಿ ವಾಸ್ತವ್ಯವಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಪೇಟೆಯಲ್ಲಿರುವ ಜೈನ್ ರೆಸ್ಟೋರೆಂಟ್ ಎಂಬ ಹೆಸರಿನ ಹೋಟೆಲ್ ಅನ್ನು ನಡೆಸಿಕೊಂಡಿದ್ದರು.

ಜು.31 ರಂದು ಕೈ ನೋವು ವೈದ್ಯರ ಬಳಿ ಹೋಗಿ ಬರುತ್ತೇನೆ ಎಂದು ಹೋಟೆಲ್ ನಿಂದ ಆ್ಯಕ್ಟಿವಾ ಸ್ಕೂಟರ್ ನಲ್ಲಿ ತೆರಳಿದ ಅವರು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಸಂದೀಪ್ ಅವರ ಪತ್ನಿ ಅಕ್ಷತಾ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ಸಂದೀಪ್ ಪತ್ತೆಯಾದಲ್ಲಿ 08256-286375 ಅಥವಾ 0824-2220500 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here