

ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ ಕುರಿತು ಫೇಸ್ ಬುಕ್ ಜಾಲತಾಣದಲ್ಲಿ ವಸಂತ ಗಿಳಿಯಾರ್ ಎಂಬ ಖಾತೆಯಲ್ಲಿ ವಿಡಿಯೋವನ್ನು ಲೈವ್ ಆಗಿ ಪೋಸ್ಟ್ ಮಾಡಿ ಯಾವುದೇ ಆಧಾರವಿಲ್ಲದೆ ಮಾನ ಹಾನಿ ಮಾಡುವ ಉದ್ದೇಶವನ್ನು ವಸಂತ ಬಂಗೇರ ಅಭಿಮಾನಿ ಬಳಗ ತೀವ್ರ ಖಂಡಿಸಿ ಪೋಸ್ಟ್ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಠಾಣಾಧಿಕಾರಿಗಳಿಗೆ ದೂರು ನೀಡಲಾಗಿದೆ.ವಸಂತ ಬಂಗೇರರ ಅಭಿಮಾನಿಗಳು ಆ.2 ರಂದು ಶ್ರೀ ಗುರುನಾರಾಯಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಹೇಳಿದರು.
ವಸಂತ ಗಿಳಿಯಾರ್ ಮಾನ ಹಾನಿ ಮಾಡುವ ಉದ್ದೇಶದಿಂದ “ನಾನು ಮೈಸೂರಿಗೆ ಹೋದಾಗ ಒಂದು ಘಟನೆ ನಡೆಯುತ್ತದೆ.ಅಲ್ಲಿ ಒಡನಾಡಿ ಸ್ಟ್ಯಾಲ್ನಿಗೆ ತಿಮರೋಡಿಯವರ ಮೊಬೈಲ್ ನಿಂದ ವಸಂತ ಬಂಗೇರ ಕಾಲ್ ಮಾಡುತ್ತಾರೆ.ನಾನು ಎಪಿಸೋಡದಲ್ಲಿ ಹೇಳಲ್ಲ ಬಹುಷಃ ಇಲ್ಲಿ ವೈರಲ್ ಆಗಬಹುದು, ಇಲ್ಲಿ ಲೈವ್ ನಲ್ಲಿ ವೈರಲ್ ಆಗುತ್ತದೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಹಿಂದಿನ ಶಾಸಕರಾಗಿದ್ದರು. ಧರ್ಮಸ್ಥಳಕ್ಕೆ ಬಹಳ ನಡಕೊಂಡಿದ್ದವರು, ವಸಂತ ಬಂಗೇರರವರು ಬಹುಶಃ ಧರ್ಮಸ್ಥಳಕ್ಕೆ ಹ್ಯಾಗೆ ಉಲ್ಟ ಆಗ್ತಾರೆ ಅಂತ ಹೇಳಿದ್ರೆ ಅದಕ್ಕೆ ಸಂಬಂಧಪಟ್ಟಂತಹ ಅಭಯಚಂದ್ರ ಜೈನ್ ರವರ ಪರವಾಗಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಅಭಯಚಂದ್ರರು ಮಿನಿಸ್ಟರ್ ಆದ್ರು, ವಸಂತ ಬಂಗೇರರು ಮಿನಿಸ್ಟರ್’ ಆಗಲಿಲ್ಲ ಎನ್ನುವ ಒಂದು ನೋವು ಸಂಕಟವು ಅವರಿಗೆ ಇರಬಹುದು.ಅವರು ಸ್ಪ್ಯಾಲ್ನಿಯವರಿಗೆ ಫೋನ್ ಮಾಡಿದಾಗ ನಮ್ಮಲ್ಲಿ ರೆಕಾರ್ಡ್ ಆಗಿದೆ.ನಮತ್ರ ರೆಕಾರ್ಡ್ ಡಾಕ್ಯುಮೆಂಟ್ ಇದೆ.ವಸಂತ ಬಂಗೇರರವರು ಸ್ವಾಲ್ನಿಯವರತ್ರ ಮಾತಾಡ್ತಾರೆ.ಒಡನಾಡಿ ಸಂಸ್ಥೆಯವರಿಗೆ ಸ್ವಾಲ್ನಿ ಹೇಳ್ತಾರೆ ಹಂದಿಯನ್ನ ಹ್ಯಾಗ್ ಹೊಡಿಬೇಕು ಹಾಗೆ ಎಲ್ಲರೂ ಸೇರಿ ಹೊಡಿಯೋಣ ಈ ಮಾತನ್ನು ನೀವು ನೆನಪಿಟ್ಟುಕೊಳ್ಳಿ ಹಂದಿಯನ್ನ ನಾವು ಹ್ಯಾಗ್ ಹೊಡಿಬೇಕು. ಹಂಗೆ ನಾವು ಆ ಹಂದಿಯನ್ನ ಹೊಡಿಯೋಣ. ಧರ್ಮಸ್ಥಳದ ಬಗ್ಗೆ ಇವರಾಡುವ ಮಾತು ಅಲ್ಲಿ ಒಂದು ಅನುಮಾನ ಉಂಟಾಗಲು ಪ್ರಾರಂಭವಾಯಿತು.ಇವರೆಲ್ಲ ಇವರ ವೈಯಕ್ತಿಕವಾದ ದ್ವೇಷವನ್ನ ನಮ್ಮ ಏನು ಧಾರ್ಮಿಕವಾದ ಸಾನಿಧ್ಯದ ಮೇಲೆ ಇಡ್ಕೊಂಡು ಸೌಜನ್ಯ ಎಂಬ ಹೆಣ್ಣಿನ ಹೆಗಲ ಮೇಲೆ ಬಂದೂಕನ ಇಟ್ಟುಕೊಂಡು, ಯಾರಯಾರದೋ ದಾರಿ ತಪ್ಪಿ ಏನೇನೋ ಮಾಡಿಕ್ಕೆ ಹೊರಟಿದ್ದಾರೆ” ಎಂದು ಹೇಳಿದ್ದು ಈ ಪೋಸ್ಟನ್ನು ಆಧಾರವಾಗಿಟ್ಟುಕೊಂಡು ಬೆಳ್ತಂಗಡಿ ತಾಲೂಕಿನ ಹಲವು ವ್ಯಕ್ತಿಗಳು ಈ ಮೆಸೇಜನ್ನು ಹಲವಾರು ವ್ಯಕ್ತಿಗಳಿಗೆ ಫಾರ್ವಡ್ ಮಾಡಿದ್ದು ಈಗ ಕೆಲವು ವ್ಯಕ್ತಿಗಳು ಈ ಮೇಲಿನ ವಿಷಯಗಳನ್ನು ಬಂಗೇರರು ಹೇಳಿರುತ್ತಾರೆ ಎಂದು ಪ್ರಚಾರವನ್ನು ಮಾಡಿ ಬಂಗೇರರ ಮಾನ ಹಾನಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಈ ವಿಷಯವನ್ನು ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರಚಾರ ಪಡಿಸಿ ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ದ್ವೇಷದ ಬೀಜವನ್ನು ಬಿತ್ತಿ ಬೆಳ್ತಂಗಡಿ ತಾಲೂಕಿನ ಕೋಮು ಸೌಹಾರ್ದತೆಗೆ ಭಂಗವನ್ನು ತರುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಈ ವಿಡಿಯೋ ತುಣುಕಿನಲ್ಲಿ ಹೇಳಿದಂತೆ ತಿಮರೋಡಿಯವರ ಮೊಬೈಲ್‌ನಿಂದ ಸ್ಟ್ಯಾಲ್ನಿಯವರಿಗೆ ಯಾವುದೇ ಕರೆಯನ್ನು ಮಾಡಿರುವುದಿಲ್ಲ. ಅಲ್ಲದೆ ಅವರು ಮೊಬೈಲ್‌ನಿಂದ ಸ್ಟ್ಯಾಲ್ನಿಯವರಿಗೆ ಯಾವುದೇ ಕರೆಯನ್ನು ಮಾಡಿರುವುದಿಲ್ಲ.ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಯಾವುದೇ ಮಾತುಗಳನ್ನು ಹೇಳಿರುವುದಿಲ್ಲ.ಧರ್ಮಸ್ಥಳ ಕ್ಷೇತ್ರದ ಬಗ್ಗೆ ಬಂಗೇರರಿಗೆ ಅಪಾರ ನಂಬಿಕೆ ಇದ್ದು, ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಯಾವುದೇ ಮಾತುಗಳನ್ನು ಆಡಿರುವುದಿಲ್ಲ.ಬಂಗೇರರ ಹೆಸರನ್ನು ಅನಾವಶ್ಯಕವಾಗಿ ಬಳಸಿ ಅವರ ತೇಜೋವದೆಯನ್ನು ಮಾಡಲು ಎದುರುದಾರರು ಪ್ರಯತ್ನಿಸುತ್ತಿದ್ದಾರೆ.ಈ ಆಪಾದನೆಯು ಸಂಪೂರ್ಣ ಸುಳ್ಳಾಗಿರುತ್ತದೆ.ಆಧಾರ ರಹಿತ ಸುಳ್ಳು ಸುದ್ದಿಯನ್ನು ಹರಡಲು ಫೇಸ್ ಬುಕ್ ಜಾಲತಾಣದಲ್ಲಿರುವ ಈ ಸುಳ್ಳು ಸುದ್ದಿಯನ್ನು ರಾಜ್ಯಾದ್ಯ0ತ ಹರಡಿ ತಾಲೂಕಿನ ಕೋಮು ಸೌಹಾರ್ದತೆಗೆ ಭಂಗ ತರಲು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.ಈ ಸುಳ್ಳು ಸುದ್ದಿಯನ್ನು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಸಂತ ಗಿಳಿಯಾರ್ ಮತ್ತು ತಾಲೂಕಿನಾದ್ಯಂತ ಮಾಜಿ ಶಾಸಕ ವಸಂತ ಬಂಗೇರರ ಕುರಿತು ತೇಜೋವಧೆಯಾಗಿ ಹಾಗೂ ಕೋಮು ಸೌಹಾರ್ದತೆಗೆ ಭಂಗ ತರುವ ವ್ಯಕ್ತಿಗಳಾದ ಚಂದ್ರಹಾಸ ಚಾರ್ಮಾಡಿ, ಅಶೋಕ ಪೂಜಾರಿ ಕುಂಜಿಮೇರು ಕೊಯ್ಯೂರು, ಧನಂಜಯ ಜೈನ್ ಕುದ್ಯಾಡಿ ಇವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಏಲ್ದಕ್ಕ, ಈಶ್ವರ್ ಭಟ್ ಮಾಯಿಲತ್ತೋಡಿ, ವಕೀಲ ಸಂತೋಷ್ ಕುಮಾರ್, ಜಿ.ಪಂ.ಮಾಜಿ ಸದಸ್ಯರುಗಳಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್, ತಾ.ಪಂ ಮಾಜಿ ಸದಸ್ಯ ನವೀನ್ ಗೌಡ, ಆಯಿಬು ತಣ್ಣೀರುಪಂತ, ವಸಂತಿ.ಸಿ ಪೂಜಾರಿ ಅಳದಂಗಡಿ, ಬೊಮ್ಮಣ್ಣ ಗೌಡ ಪುದುವೆಟ್ಟು, ಪ್ರಭಾಕರ ಹೆಗ್ಗಡೆ, ರಾಜಶೇಖರ್ ಶೆಟ್ಟಿ, ಲೋಕೇಶ್ ಗೌಡ, ಜಯ ವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.