


ಮಡಂತ್ಯಾರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಾಥಮಿಕ ಹಂತದ ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯಾದ ಅಲಿಶಾ ಡೇಸರವರು ದ್ವಿತೀಯ ಸ್ಥಾನ ಪಡೆದು ಹಾಗೂ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿಯಾದ ಶೇಕ್ ಮುಹಮ್ಮದ್ ಹಿಶಾಮ್ ರವರು ತೃತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ನಮ್ಮ ಶಾಲಾ ದೈಹಿಕ ಶಿಕ್ಷಕರಾದ ಶ್ರೀ ವಲೇರಿಯನ್ ಡಿಸೋಜರವರು ಸಹಕಾರ ನೀಡಿರುತ್ತಾರೆ.