ಅರಸಿನಮಕ್ಕಿ: ಜು.30ರಂದು ಸಂಘದ ವಾರ್ಷಿಕ ಮಹಾಸಭೆ ಗೋಪಾಲ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ ಇಲ್ಲಿ ನಡೆಯಿತು.ಸಭೆಯಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ವಾರ್ಷಿಕ ವರದಿ ಮಂಡಿಸಿದರು.
ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಅವರು ಮಾತನಾಡಿ ಸಂಘವು ಕಳೆದ 4 ವರ್ಷದಿಂದ ಉತ್ತಮ ಕೆಲಸ ಮಾಡಿಕೊಂಡು ಬಂದಿದೆ.ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಮತ್ತು ಸದಸ್ಯರ ಪ್ರೋತ್ಸಾಹದಿಂಧ ಪ್ರತಿ ವರ್ಷವೂ ಉತ್ತಮ ಬೆಳವಣಿಗೆ ಕಂಡಿದೆ ನಾನು ಅಧ್ಯಕ್ಷನಾದ ಮೊದಲ ವರ್ಷ ಸಂಘವು 96 ಲಕ್ಷ ಲಾಭ ಕಂಡಿದ್ದು 2ನೇ ವರ್ಷ1.1ಕೋಟಿ ಲಾಭ 3ನೇ ವರ್ಷ 1.17 ಕೋಟಿ ನಿವ್ವಳ ಲಾಭ ಕಂಡಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ 2022-23ನೇಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅರಸಿನಮಕ್ಕಿ ಪ್ರೌಢ ಶಾಲೆ ಮತ್ತು ನೇಲ್ಯಡ್ಕ ಪ್ರೌಢ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗೆ ಮತ್ತು ಸಂಘದ ಸದಸ್ಯರ ಮಕ್ಕಳ ಪೈಕಿ ಹೊರಗಿನ ಶಾಲೆಯಲ್ಲಿ ಕಲಿತು ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗೆ ಗೌರವಧನ ಪುರಸ್ಕಾರ ಮಾಡಲಾಯಿತು.
ಮುರಳೀಧರ ಶೆಟ್ಟಿಗಾರ್ ಧನ್ಯವಾದವಿತ್ತರು.ವೇಧಿಕೆಯಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಉಪಾಧ್ಯಕ್ಷರಾದ ರಾಜು.ಕೆ ನಿರ್ದೇಶಕರುಗಳಾದ ಕೊರಗಪ್ಪ ಗೌಡ, ರತೀಶ್ ಬಿ, ಧರ್ಮರಾಜ್ ಎ, ತಾರ.ಟಿ ಚಿಪ್ಲೂನ್ಕಾರ್, ಗಂಗಾವತಿ, ಬೇಬಿ, ನಾಗೇಶ್.ಜಿ, ಕುಶಾಲಪ್ಪ ಗೌಡ, ಬೇಬಿಕಿರಣ್, ಮುರಳೀಧರ ಶೆಟ್ಟಿಗಾರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ರವರು ಉಪಸ್ಥಿತರಿದ್ದರು.