ಉಜಿರೆ: ಶ್ರೀ ಧ.ಮಂ.ವ.ಪ. ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಯಾಂತ್ರಿಕೃತ ಭತ್ತ ನಾಟಿಯ ಪ್ರಾತೇಕ್ಷಿಕಯ ಮಾಹಿತಿ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಆಯೋಜಿಸಲ್ಪಟ್ಟ ಯಾಂತ್ರಿಕೃತ ಭತ್ತ ನಾಟಿಯ ಪ್ರಾತ್ಯಕ್ಷಿಕೆಯನ್ನು ಸೋನಿಯಾ ವರ್ಮಾ ನಿನಾದ ಚಿಲುಮೆ ನಾಟಿ ಯಂತ್ರಕ್ಕೆ ಸಸಿಮಡಿಯನ್ನು ನೀಡುವ ಮೂಲಕ ಚಾಲನೆಯನ್ನು ನೀಡಿದರು.

ವಿದ್ಯಾರ್ಥಿಗಳಿಗೆ ಭತ್ತವನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎನ್ನುವ ಸಂದೇಶದೊಂದಿಗೆ, ಊಟದ ಅನ್ನದ ಒಂದು ಅನ್ನದ ಅಗಳಿನ ಮಹತ್ವತೆಯನ್ನು ನಾವು ಅರ್ಥ ಮಾಡಿಕೊಂಡು ಅನ್ನದ ಅಗಳನ್ನು ಬಿಸಾಡಬಾರದು, ಮಳೆ ಗಾಳಿ ಬಿಸಿಲಿನಲ್ಲಿ ಭತ್ತದ ಸಸಿಯು ಹಂತ ಹಂತದಲ್ಲಿಯೂ ಕೂಡ ಬೆಳೆದು ನಮಗೆ ಅನ್ನವನ್ನು ನೀಡುತ್ತದೆ, ಹಿಂದಿನ ಕಾಲದ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತ ಕೃಷಿಯನ್ನು ಮಾಡಿದಾಗ ಸಮಯವು ಹೆಚ್ಚು ವ್ಯರ್ಥವಾಗಿ ಕೂಲಿಯಾಳುಗಳ ಹೆಚ್ಚಿನ ಬಳಕೆಯನ್ನು ಮಾಡಿ ಖರ್ಚು ಕೂಡ ಹೆಚ್ಚಾಗುತ್ತಿತ್ತು, ಇಂದು ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸಿ ಕಡಿಮೆ ಖರ್ಚಿನಲ್ಲಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಮಾಡಬಹುದಾಗಿದೆ ಎನ್ನುವ ಮಾತಿನೊಂದಿಗೆ ಮಕ್ಕಳಿಗೆ ನಾವು ಯಾವುದೇ ಶಿಕ್ಷಣ ಅಥವಾ ಪದವಿ ಉದ್ಯೋಗವನ್ನು ಮಾಡಿದರು ಕೂಡ ಭತ್ತ ಕೃಷಿಯನ್ನು ಉಳಿಸಬೇಕಾಗಿದೆ ಈ ನಿಟ್ಟಿನಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯುವರಾಜ್ ಪೂವಣಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಕುಮಾರ್.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುನಿಲ್ ಪಂಡಿತ್. ತೃಪ್ತ ಜೈನ್ ಎಸ್ ಡಿ ಎಂ ಉಜಿರೆ.ರತ್ನಮಾನಸ ಪಾಲಕ ಯತೀಶ್ ಕೆ ಬಳೆಂಜ.ಬೆಳ್ತಂಗಡಿ ಕೃಷಿ ಮೇಲ್ವಿಚಾರಕ ರಾಮ್ ಕುಮಾರ್ ಮತ್ತು ಸಿ ಎಚ್ ಎಸ್ ಸಿ ಪ್ರಬಂಧಕ ಸಚಿನ್.ಇಕೋ ಕ್ಲಬ್ ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here