ಮಚ್ಚಿನ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದೇ ರೋಗಿಗಳಿಗೆ ಕತ್ತಲೆಯಲ್ಲಿ ಆರೋಗ್ಯ ತಪಾಸಣೆ

0

ಮಚ್ಚಿನ :ಮಚ್ಚಿನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ರೋಗಿಗಳಿಗೆ ಕತ್ತಲೆಯಲ್ಲಿ ಆರೋಗ್ಯ ತಪಾಸಣೆ ನಡೆಸುವಂತ ಪರಿಸ್ಥಿತಿಯಲ್ಲಿದೆ.

ಮಳೆಗಾಲದಲ್ಲಿ ಕರೆಂಟ್ ಇಲ್ಲದೆ ಇರುವುದು ಸರ್ವೇಸಾಮಾನ್ಯವಾಗಿದ್ದು ಆದರೆ ಈ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ಇನ್ವರ್ಟರ್ ವ್ಯವಸ್ಥೆಗಳು ಇಲ್ಲದೆ ಟಾರ್ಚ್ ಬೆಳಕಿನಿಂದ ಚಿಕಿತ್ಸೆ ನೀಡುವಂತಾಗಿದೆ ಈ ಆರೋಗ್ಯ ಕೇಂದ್ರವು ಕಿರಿದಾದ ಕೊಠಡಿಯಲ್ಲಿದ್ದು ಹೊರಗಿನ ಬೆಳಕು ಬೀಳದೆ ಕತ್ತಲೆಯಲ್ಲಿದ್ದು ತಪಾಸಣೆ ನಡೆಸಲು ಅಸಾಧ್ಯಕರವಾಗಿದೆ ವಿವಿಧ ತಪಾಸನೆಗಳಿಗೆ ಕರೆಂಟ್ ಬರುವವರೆಗೂ ಕಾದು, ರೋಗಿಗಳಿಗೆ ಚಿಕಿತ್ಸೆ ನೀಡುವಂತ ಪರಿಸ್ಥಿತಿಯಲ್ಲಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ.ಗ್ರಾಮ ಪಂಚಾಯತ್ ತಕ್ಷಣ ಗಮನಹರಿಸಿ ಇನ್ವರ್ಟರ್ ಅಳವಡಿಸಿ ಜನರಿಗೆ ಚಿಕಿತ್ಸೆಗೆ ಅನುಕೂಲಗೊಳಿಸಬೇಕಾಗಿದೆ.

p>

LEAVE A REPLY

Please enter your comment!
Please enter your name here