ಉಜಿರೆ: ಉಜಿರೆ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಸುಮಾರು 45 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ.
ಬೆಳಿಗ್ಗೆ ಕಸ ತೆಗೆಯಲು ಬಂದ ಮಹಿಳೆ ಶವ ಪತ್ತೆಯಾಗಿದ್ದನ್ನು ತಿಳಿಸಿದ್ದಾರೆ.ಬಳಿಕ ಉಜಿರೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಠಾಣಾಧಿಕಾರಿ ಚಂದ್ರಶೇಖರ ಎ.ಎಮ್, ಪೊಲೀಸರಾದ ಪಣಲಿವೇಲು, ರಾಮಕೃಷ್ಣ ಇವರು ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಮೃತ ದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ರವೀಂದ್ರ, ಸುಧೀರ್, ರಾಘವೇಂದ್ರ ನಾಯ್ಕ್, ರಾಘವೇಂದ್ರ ಉಜಿರೆ ಪೊಲೀಸ್ ರಿಗೆ ಸಹಕಾರ ನೀಡಿರುತ್ತಾರೆ.
p>