ಕಾಪಿನಡ್ಕ: ಗಾಂಧಿನಗರ ನಿವಾಸಿ, ಆಟೋ ಚಾಲಕ-ಮಾಲಕ ಸಂಘದ ಮಾಜಿ ಅಧ್ಯಕ್ಷ ಸುಂದರ ದಾಸ್ ನಿಧನ

0

ಕಾಪಿನಡ್ಕ: ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಗಾಂಧಿನಗರ ನಿವಾಸಿ, ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಸುಂದರ ದಾಸ್ (50ವ) ಕಳೆದ ರಾತ್ರಿ ಜು. 24 ರಂದು ನಿಧನರಾದರು.

ಕಳೆದ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣ ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಸೇರಿಸುವ ದಾರಿ ಮಧ್ಯದಲ್ಲಿ ನಿಧನರಾದರು.
ಕಾಪಿನಡ್ಕ ಹಾಗೂ ಬಳಂಜದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ರಾಜೀವಿ ದಾಸ್, ಎರಡು ಪುತ್ರರಾದ ಉಲ್ಲಾಸ್, ದುರ್ಗಾಪ್ರಸಾದ್, ಓರ್ವ ಪುತ್ರಿ ದಿವ್ಯಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here