ಬ್ರಾಹ್ಮಣರು ತಮ್ಮತನವನ್ನು ಉಳಿಸಿಕೊಂಡು ಆಧುನಿಕ ಸಮಾಜದ ಸವಾಲುಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು: ಡಾ.ರಾಘವೇಂದ್ರ ಹೊಳ್ಳ

0

ಉಜಿರೆ : ಬ್ರಾಹ್ಮಣರು ತಮ್ಮ ತಮ್ಮನವನ್ನು ಉಳಿಸಿಕೊಂಡು ಆಧುನಿಕ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮನ್ನು ತೆರೆದುಕೊಳ್ಳಬೇಕು. ಇಂದು ಆಧುನಿಕ ಸಮಾಜ ಒದಗಿಸುವ ಅವಕಾಶಗಳು ಸಾಕಷ್ಟಿವೆ, ಆದರೆ ಅವುಗಳನ್ನು ಸದುಪಯೋಗಿಸಿಕೊಳ್ಳುವ ಬರದಲ್ಲಿ ತಮ್ಮತನವನ್ನು ನಾವು ಕಳೆದುಕೊಳ್ಳಬಾರದು. ಸಾಧನೆ ಮಾಡಬೇಕು ಎಂಬ ಛಲದಿಂದ ಮುಂದುವರೆಯುವ ಬ್ರಾಹ್ಮಣ ಮಕ್ಕಳಿಗೆ ಪರಂಪರೆಯಿಂದ ಬಂದ ಬುದ್ಧಿವಂತಿಕೆ ವರವಾಗುತ್ತದೆ. ಆಧುನಿಕ ಕಾಲಕ್ಕೆ ಅನುಗುಣವಾಗಿ ಹೆಚ್ಚು ಆತ್ಮವಿಶ್ವಾಸದಿಂದ ಹೊಸ ಹೊಸ ತನ್ನ ಮಾಡುವಂತಹ ಹುಮ್ಮಸ್ಸು, ಸ್ಪೂರ್ತಿಯನ್ನು ಒದಗಿಸುವ ಕೆಲಸವನ್ನು ಹಿರಿಯರು ಮಾಡಬೇಕು ಎಂದು ಡಾ. ರಾಘವೇಂದ್ರ ಹೊಳ್ಳ ಕರೆ ನೀಡಿದರು.ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಸ್ಥಾಪಕರಾದ ಡಾ.ರಾಘವೇಂದ್ರ ಹೊಳ್ಳ ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಾಸಭೆಯ ಸಂದರ್ಭದಲ್ಲಿ ಹಮ್ಮಿಕೊಂಡ ದಿಕ್ಸೂಚಿ – ಶುಭ ಚಿಂತನೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಶ್ರೀ ಶರತ್ ಕೃಷ್ಣ ಪಡುವೆಟ್ನಾಯ ಜನಾರ್ಧನ ಸ್ವಾಮಿ ದೇವಸ್ಥಾನದ ಸೇವೆಯಲ್ಲಿ ಕೂಟ ಬಂಧುಗಳ ಕೊಡುಗೆಯನ್ನು ಸ್ಮರಿಸಿ ಅಂಗಸಂಸ್ಥೆಯ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ದಿಕ್ಸೂಚಿ ಶುಭ ಚಿಂತನೆ ಚಿಂತನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ್ ಹೊಳ್ಳ ಮಜ್ಜೇನಿಬೈಲು ವಹಿಸಿದ್ದರು. ಶ್ರೀ ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮತ್ತು ಕಾರ್ಯದರ್ಶಿಗಳಾದ ವಿಷ್ಣು ಪ್ರಕಾಶ್ ವಂದಿಸಿದರು.

LEAVE A REPLY

Please enter your comment!
Please enter your name here