ಜೆಸಿಐ ಬೆಳ್ತಂಗಡಿ ಮಂಜುಶ್ರೀ ಉಪಾಧ್ಯಕ್ಷ,ಯುವ ಉದ್ಯಮಿ ಶೀತಲ್ ಜೈನ್ ರವರಿಗೆ ಉದ್ಯಮ ರತ್ನ ಪ್ರಶಸ್ತಿ: ಜೆಸಿಐ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ರವರಿಗೆ ಶೈನಿಂಗ್ ಸೂಪರ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ

0

ಬೆಳ್ತಂಗಡಿ : ಜೆಸಿಐ ಶಂಕರನಾರಾಯಣ ಆತಿಥ್ಯ ದಲ್ಲಿ ನಡೆದ ವಲಯದ ಬಿಸಿನೆಸ್ ಕಾನ್ಫರೆನ್ಸ್ ನಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷ ಬೆಳ್ತಂಗಡಿ ಪವರ್ ಆನ್ ಬ್ಯಾಟರಿ ಮಾಲಕ, ಯುವ ಉದ್ಯಮಿ ಶೀತಲ್ ಜೈನ್ ರವರಿಗೆ ಜೆಸಿಐ ವಲಯ 15 ನೀಡುವ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ, ಉಪನ್ಯಾಸಕ ಶಂಕರ್ ರಾವ್ ರವರಿಗೆ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಿಂದ ಘಟಕದ 74% ಬೆಳವಣಿಗಾಗಿ ಶೈನಿಂಗ್ ಸೂಪರ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ ಲಭಿಸಿದೆ.

ಜೆಸಿಐ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಅಧಿಕಾರಿ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯದರ್ಶಿ ಸುಧೀರ್ ಕೆ. ಎನ್ ರವರು ಲಕ್ಕಿ ಆಫೀಸರ್ ಮನ್ನಣೆಗೆ ಪಾತ್ರರಾದರು.ಘಟಕದ ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಜೈನ್, ಸೋಶಿಯಲ್ ಮೀಡಿಯಾ ನಿರ್ದೇಶಕ ಅರಿಹಂತ್ ಜೈನ್, ಸದಸ್ಯರುಗಳಾದ ಶೈಲೇಶ್ ಮತ್ತು ವಿನಾಯಕ್ ಪ್ರಸಾದ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here