ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿಗೆ ನ್ಯಾಕ್ ನಿಂದ ‘ಎ’ ಶ್ರೇಣಿ ಮಾನ್ಯತೆ

0

ಮಡಂತ್ಯಾರು: ಕಳೆದ ಜೂನ್ 26 ಹಾಗೂ 27ರಂದು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿಗೆ ನ್ಯಾಕ್ ಸಮಿತಿಯವರು ಭೇಟಿ ನೀಡಿ ಕಾಲೇಜಿನ ಪಠ್ಯ, ಪಠ್ಯೇತರ, ಮೂಲಸೌಕರ್ಯ, ಸಂಶೋಧನೆ ಇತ್ಯಾದಿ ಕ್ಷೇತ್ರಗಳನ್ನು ಪರಿಶೀಲನೆ ನಡೆಸಿದರು.

ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ಮತ್ತು ಸಿಬ್ಬಂದಿ ವರ್ಗ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ ನಡೆಸಿ ಕಾಲೇಜಿನ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಜುಲೈ 19ರಂದು ಈ ಭೇಟಿಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಕಾಲೇಜಿಗೆ ನಾಲ್ಕನೇ ಆವೃತ್ತಿಯಲ್ಲಿ 3.12 ಅಂಕಗಳೊಂದಿಗೆ ‘ಎ’ ಶ್ರೇಣಿ ಮಾನ್ಯತೆ ಲಭಿಸಿದೆ ಮಾತ್ರವಲ್ಲದೆ ಕಾಲೇಜಿಗೆ ಸತತ ಮೂರನೇ ಬಾರಿಗೆ ‘ಎ’ ಮಾನ್ಯತೆ ಪಡೆದಂತಹ ಗೌರವ ಲಭಿಸಿದೆ.ಈ ಸಾಧನೆಗೆ ಕಾರಣಕರ್ತರಾದ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶ್ರಮವಹಿಸಿದ ಸಿಬ್ಬಂದಿ ವರ್ಗ, ಶಿಕ್ಷಕ ರಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಹಿತೈಷಿ ಬಳಗ ಮತ್ತು ಪ್ರಸಕ್ತ ವಿದ್ಯಾರ್ಥಿ ಸಮೂಹಕ್ಕೆ ಕಾಲೇಜಿನ ಪರವಾಗಿ ಹಾರ್ದಿಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here