ಆಟೋ ಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ, ಬಿಎಂಎಸ್ ವೆಹಿಕಲ್ ಯೂನಿಯನ್ ಸಂಘದಿಂದ ರಾಮಲಿಂಗ ರೆಡ್ಡಿಯವರಿಗೆ ಮನವಿ

0

ಆಟೋ ಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ ಕರ್ನಾಟಕ ಸರಕಾರದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಬಿಎಂಎಸ್ ನ ವೆಹಿಕಲ್ ಯೂನಿಯನ್ ಸಂಘಗಳಿಂದ ಇಂದು ಬೆಂಗಳೂರು ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲಿ ಭೇಟಿ ಮಾಡಲಾಯಿತು ಈ ಸಂದರ್ಭದಲ್ಲಿ ಈ ಕೆಳಗಿನ ವಿಷಯಗಳಂತೆ ಚಾಲಕನ ಭವಿಷ್ಯಕ್ಕೆ ಪೂರಕವಾಗುವ ಭದ್ರತಾ ಯೋಜನೆಗಳನ್ನು ರೂಪಿಸುವಂತೆ ಕೋರಿ ಕೊಳ್ಳಲಾಯಿತು.

ಕರ್ನಾಟಕ ರಾಜ್ಯದಲ್ಲಿ ಖಾಸಗಿ ಸಾರಿಗೆ ಚಾಲಕರ ಸಮಸ್ಯೆ ಮತ್ತು ಕ್ಷೇಮಾಭಿವೃದ್ಧಿಗೆ ಯಾವುದೇ ಪಕ್ಷದ ರಾಜ್ಯ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ. ಖಾಸಗಿ ಫೈನಾನ್ಸ್‌ಗಳ ಕಿರುಕುಳದಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಪಕ್ಷದ ರಾಜ್ಯ ಸರ್ಕಾರ ಖಾಸಗಿ ಸಾರಿಗೆ ಚಾಲಕರನ್ನು ಕೀಳಾಗಿ ಕಾಣುತ್ತಿದೆ ಎಂದು ನಮಗೆ ಅನಿಸುತ್ತಿದೆ.

ಈ ಸರಣಿಯಲ್ಲಿ ಆಟೋ ಮತ್ತು ಖಾಸಗಿ ಸಾರಿಗೆ ಚಾಲಕರ ಸಮಸ್ಯೆಗಳ ಪರಿಹಾರಕ್ಕೆ ಬಿಪಿಟಿಎಂಎಂ ಆಂದೋಲನಕ್ಕೆ ಸಿದ್ಧತೆ ನಡೆಸಲಾಗಿದೆ. ಇದರ ಅಡಿಯಲ್ಲಿ, ನಾವು ನಮ್ಮ ಸಮಸ್ಯೆಯ ಬಗ್ಗೆ ತಿಳಿಸುವ ಜ್ಞಾಪಕ ಪತ್ರವನ್ನು ನೀಡುತ್ತಿದ್ದೇವೆ. ಆದ್ದರಿಂದ, ನೀವು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಉಪಕ್ರಮವನ್ನು ತೆಗೆದುಕೊಳ್ಳಲು ಮತ್ತು ಖಾಸಗಿ ಸಾರಿಗೆ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಿ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಕೆಳಗಿನಂತೆ ‌ಬೇಡಿಕೆ ಸಲ್ಲಿಸುತ್ತಿದ್ದೇವೆ

ಬೇಡಿಕೆಗಳು

  • ಖಾಸಗಿ ಸಾರಿಗೆ ನೌಕರರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು.
  • ಸಾರಿಗೆ ವಾಹನಗಳ ವಿಮೆಯನ್ನು ಶೇ.50ರಷ್ಟು ಕಡಿಮೆ ಮಾಡಬೇಕು.
  • ಆಟೋ ಮೀಟರ್ ಚಾರ್ಜ್ ಕನಿಷ್ಠ 30℅ ಹೆಚ್ಚಿಸಬೇಕು.
  • ವಸತಿ ರಹಿತ ಎಲ್ಲ ಚಾಲಕರಿಗೂ ವಸತಿ ಸೌಲಭ್ಯ ಕಲ್ಪಿಸಬೇಕು
  • ರಾಜ್ಯದಲ್ಲಿ ಈಗ ಹೊಸದಾಗಿ ಉಚಿತ ಬಸ್ಸು ಪ್ರಯಾಣದಿಂದ ಪ್ರಯಾಣದಿಂದ ಆಟೋ ಚಾಲಕರ ಬದುಕು ಬೀದಿಗೆ ಬಂದಿರುತ್ತದೆ ಆದ್ದರಿಂದ ಆಟೋ ಚಾಲಕರ ಬದುಕಿಗೆ ಪೂರಕವಾಗುವ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು

*ವಾಹನದ ಇನ್ಸೂರೆನ್ಸ್ ಕ್ಲೇಮ್ ನ ಸಂದರ್ಭದಲ್ಲಿ ಬ್ಯಾಡ್ಜ್ ಕಡ್ಡಾಯ ಮಾಡುವುದನ್ನು ಇತರ ರಾಜ್ಯಗಳಂತೆ ಕೈ ಬಿಡಬೇಕು

  • ಇಡೀ ರಾಜ್ಯದಲ್ಲಿ ಚಾಲಕ ಬಂಧು ಯೋಜನೆ ಆರಂಭಿಸಬೇಕು.

*ಆಟೋ ಚಾಲಕರ ಮಕ್ಕಳಿಗೆ ಈ ಹಿಂದಿನ ಸರಕಾರ ನೀಡಿರುವ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಬೇಕು

  • ಆಟೋ ಚಾಲಕರ ಉದ್ಯೋಗಕ್ಕೆ ಧಕ್ಕೆ ತರುವ ಅಕ್ರಮ ಓಲಾ ಉಬರ್‌,ರಾಪಿಡ್ ಬೈಕುಗಳನ್ನು ನಿಷೇಧಿಸಬೇಕು
  • ಆಟೋಗಳು, ಶಾಲಾ ವ್ಯಾನ್‌ಗಳು ಮತ್ತು ಇತರ ಸಾರಿಗೆ ವಾಹನಗಳಿಗೆ ಪಾರ್ಕಿಂಗ್ ಬೋರ್ಡ್‌ಗಳನ್ನು ಅಗತ್ಯವಿರುವ ಕಡೆ ಒದಗಿಸಬೇಕು
  • ಶಾಲಾ ಬಸ್‌ಗಳು, ವ್ಯಾನ್‌ಗಳು, ಆಟೋಗಳು, ಆಂಬ್ಯುಲೆನ್ಸ್‌ಗಳು ಸ್ವಯಂಚಾಲಿತ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಬೇಕು.
  • ಆಟೋ ಚಾಲಕರ ಮೇಲೆ ಆರ್‌ಟಿಒ ಮತ್ತು ಸಂಚಾರ ಪೊಲೀಸರ ಜಂಟಿ ದಾಳಿ ನಿಲ್ಲಿಸಬೇಕು.
  • ವಾಹನಗಳನ್ನು ಖರೀದಿಸಲು ಮತ್ತು ಖಾಸಗಿ ಫೈನಾನ್ಷಿಯರ್‌ಗಳ ಶೋಷಣೆಯನ್ನು ತಡೆಯಲು ಚಾಲಕರು ಬ್ಯಾಂಕ್‌ಗಳ ಮೂಲಕ ಮುದ್ರಾ ಸಾಲವನ್ನು ವ್ಯವಸ್ಥೆ ಮಾಡಬೇಕು.
    • ರಾಷ್ಟ್ರವ್ಯಾಪಿ
      ಟ್ಯಾಕ್ಸಿಗಳ ಮೇಲೆ ಏಕರೂಪದ ಅಂತಾರಾಜ್ಯ ತೆರಿಗೆ ಇರಬೇಕು.

*ಆರ್ ಟಿ ಓ ಕಚೇರಿಗಳಲ್ಲಿ ಬ್ರೋಕರ್ ವ್ಯವಸ್ಥೆ ನಿಲ್ಲಿಸಬೇಕು

  • ಆರ್ ಟಿ ಓ ಮತ್ತು ಸರ್ಕಾರ ಹೆಚ್ಚಿಸಿರುವ ಚಲನ್ ಅನ್ನು 50% ಇಳಿಕೆ ಮಾಡಬೇಕು
  • ಹೊಸ ವಾಹನವನ್ನು ಖರೀದಿಸಲು ಹಾಗೂ ಮುದ್ರಾ ಯೋಜನೆ ಅಡಿ ಸಾಲವನ್ನು ಪಡೆದುಕೊಳ್ಳಲು ಅವಕಾಶ ನೀಡಬೇಕು
  • ಸರಕಾರವು 15 ವರ್ಷ ಹಳೆಯ ವಾಹನವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದು ಇದನ್ನು 20 ವರ್ಷ ದ ನಂತರ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು
  • ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕದಲ್ಲಿ ಶೇ 50ರಷ್ಟು ಸಹಾಯಧನ ನೀಡಲು ಸರ್ಕಾರ ನಿರ್ಧರಿಸಬೇಕು.
  • ಉಚಿತ ಆರೋಗ್ಯ ಚಿಕಿತ್ಸೆ
    ಆಟೋ ಚಾಲಕರು ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ವತಿಯಿಂದ ಇತರ ರಾಜ್ಯಗಳಲ್ಲಿರುವಂತೆ ಉದಾಹರಣೆ (ತಮಿಳುನಾಡು ಕೇರಳ ರಾಜ್ಯಗಳಲ್ಲಿರುವಂತೆ) ಗೊಳಿಸಬೇಕು ವೃದ್ಧಾಪ್ಯ ಪಿಂಚಣಿ ಮತ್ತು ಜೀವ ವಿಮೆ ಲಭಿಸಬೇಕು
  • ಆಟೋ ಚಾಲಕರಿಗೆ ರಿಯಾಯಿತಿ ದರದಲ್ಲಿ ಇಂಧನ ಅಥವಾ ಸಬ್ಸಿಡಿ ದರದಲ್ಲಿ ಇಂಧನವನ್ನು ನೀಡುವಂತೆ ಆಗ್ರಹಿಸುತ್ತಿದ್ದೇವೆ

*ಆಟೋ ಮತ್ತು ಟೂರಿಸ್ಟ್ ವಾಹನಗಳಿಗೆ ಸೂಕ್ತ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಬೇಕು

  • ರಾಷ್ಟ್ರೀಯ ವ್ಯಾಪ್ತಿ ಟ್ಯಾಕ್ಸಿಗಳ ಮೇಲೆ ಏಕರೂಪದ ಅಂತರ ಜೊತೆಗೆ ಇರಬೇಕು

*ಹೆದ್ದಾರಿಯಲ್ಲಿ ಲಾರಿ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು.

  • ರಾಜ್ಯದ ಎಲ್ಲ ಖಾಸಗಿ ಸಾರಿಗೆ ಚಾಲಕರಿಗೆ 10 ಲಕ್ಷ ರೂಪಾಯಿ ಅಪಘಾತ ವಿಮೆ ನೀಡಬೇಕು. ಮೇಲ್ಕಂಡ ಬೇಡಿಕೆಗಳನ್ನು ಇತ್ಯರ್ಥಗೊಳಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಭಾರತೀಯ ಖಾಸಗಿ ಸಾರಿಗೆ ಮಜ್ದೂರ್ ಮಹಾಸಂಘವು ಎಲ್ಲಾ ಖಾಸಗಿ ಸಾರಿಗೆ ಸಂಘಟನೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ ಸಾರಿಗೆ ಬಂದ್ ನಡೆಸಲಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಕೂಡಲೇ ಖಾಸಗಿ ಸಾರಿಗೆ ಕಾರ್ಮಿಕ ಸಂಘಟನೆಗಳ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ,ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ,ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕೊಡ್ಗಿ,ಕಾಪು ವಿಧಾನಸಭಾ ಕ್ಷೇತ್ರದ ಸುರೇಶ್ ಶೆಟ್ಟಿ ಗುರ್ಮೆ ಸಾಥ್ ನೀಡಿದರು.ಈ ಸಂಧರ್ಭದಲ್ಲಿ‌ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ,ಬಿಪಿಟಿಎಂಎಂ ನ ರಾಷ್ಟ್ರೀಯ ಸದಸ್ಯರಾದ ಸುರೇಶ್ ಕುಂದಾಪುರ,ಬಿಎಂಎಸ್ ದ.ಕ ಜಿಲ್ಲಾ ಜತೆ ಕಾರ್ಯದರ್ಶಿ ಸಾಂತಪ್ಪ ಕಲ್ಮಂಜ ,ಕುಂದಾಪುರ ಅಟೋ ರಿಕ್ಷಾ ಮಜ್ದೂರ್ ಸಂಘದ ಅಧ್ಯಕ್ಷರಾದ ಸುರೇಶ್ ಪುತ್ರನ್ ‘ ಬೆಳ್ತಂಗಡಿ ತಾಲೂಕು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಕ್ರಷ್ಣ ಬೆಳಾಲು,ಪ್ರಧಾನ ಕಾರ್ಯದರ್ಶಿ ರಮೇಶ್ ‌.ಕೆ ,ಪ್ರಶಾಂತ ಗರ್ಡಾಡಿ ಬಂಟ್ವಾಳ ಅಟೋ ರಿಕ್ಷಾ ಚಾಲಕ ಸಂಘದ ಫ್ರಧಾನ ಕಾರ್ಯದರ್ಶಿ ಕ್ರಷ್ಣ ಕುಮಾರ್ ಹಾಗೂ ವೇಣೂರು ವಲಯದ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ವಸಂತ ‌ಮಡಿವಾಳ ರಮೇಶ್ ಉಜಿರೆ, ಇತರ
‌ಬಿಎಂಎಸ್ ವೆಹಿಕಲ್ ಯೂನಿಯನ್ ಪ್ರಮುಖರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here