ಪದ್ಮುಂಜದಲ್ಲಿ ಎಸ್.ಜೆ.ಎಂ ರೇಂಜ್ ಸಭೆ

0

ಪದ್ಮುಂಜ: ಇಲ್ಲಿಯ ನುಸುರತ್ತುಸ್ಸಿಭಿಯಾನ್ ಮದರಸದಲ್ಲಿ ಸುನ್ನೀ ಜಂಯಿಯತುಲ್ ಮುಅಲ್ಲಿಮೀನ್ ಸಮಿತಿಯ ಕೌಂಶಿಲ್ ರೇಂಜ್ ಸಭೆಯು ಸಮಿತಿಯ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಜುಲೈ 18 ರಂದು ನಡೆಯಿತು.

ಪದ್ಮುಂಜ ಫಾರೂಕ್ ಫಾಳಿಲಿಯವರ ದುಆ ನೆರವೇರಿಸಿದರು.ಪದ್ಮುಂಜ ಖತೀಬ್ ಉಸ್ತಾದ್ ಶಿಹಾಬುದ್ದೀನ್ ಫಾಳಿಲಿಯವರು ಕಾರ್ಯಕ್ರಮ ಉದ್ಘಾಟಿಸಿದರು.

ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಸ ಅದಿ ಉಸ್ತಾದ್ ಕುದ್ರಡ್ಕ ವರದಿ ವಾಚಿಸಿದರು.ಕೋಶಾಧಿಕಾರಿ ಸುಲೈಮಾನ್ ಸ ಅದಿ ಲೆಕ್ಕ ಪತ್ರ ಮಂಡಿಸಿದರು.ಜಹ್ಫರ್ ಸ ಅದಿ ಉಸ್ತಾದ್ ಕುದ್ರಡ್ಕ ರವರು ಕಿರಾಅತ್ ಪಟಿಸಿದರು.ಮುಹಮ್ಮದ್ ಸ ಅದಿ ಉರುವಾಲು ಪದವು ಮುಹರ್ರಂ ತಿಂಗಳ ಮಹತ್ವದ ಬಗ್ಗೆ ಪ್ರಬಂಧ ಮಂಡಿಸಿದರು.ಅಧ್ಯಕ್ಷ ಭಾಷಣ ಮಾಡಿದ ಉಮರುಲ್ ಫಾರೂಕ್ ಸಖಾಫಿ ಯವರು ಮದಸರ ಅಧ್ಯಾಪಕರಿಗೆ ತುಂಬಾ ಜವಾಬ್ದಾರಿ ಇದೆ ಪುಟಾಣಿ ಮದರಸ ವಿದ್ಯಾರ್ಥಿಗಳಿಗೆ ಪ್ರವಾದಿಗಳು ಕಲಿಸಿ ಕೊಟ್ಟ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರಾಯೋಗಿಕವಾಗಿ ನಡೆಸಿಕೊಡುವುದರ ಮೂಲಕ ದೇಶ ಪ್ರೇಮವನ್ನು ಮನದಟ್ಟು ಮಾಡಿಕೊಡುವುದರೊಂದಿಗೆ ಪ್ರತಿಮದರಸದಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಬೇಕೆಂದರು.ಶಫೀಖ್ ಅಹ್ಸನಿ ಕನ್ಯಾರರಕೋಡಿಯವರು ವಾರ್ತಾ ಪ್ರಸಾರ ನಡೆಸಿದರು.

ವೇದಿಕೆಯಲ್ಲಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕಾಸಿಂ ಪದ್ಮುಂಜ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಹಿರಿಯರಾದ ಅಬೂಬಕ್ಕರ್ ಹಾಜಿ ಉಪಸ್ಥಿತರಿದ್ದರು. ಮುಹಮ್ಮದ್ ಸ ಅದಿ ಉಸ್ತಾದ್ ಉರುವಾಲು ಪದವು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here