ಉಜಿರೆ: ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಭೆ, ಪ್ರತಿಭಾ ಪುರಸ್ಕಾರ

0

2022-23 ನೇ ಶೈಕ್ಷಣಿಕ ಸಾಲಿನ ಶಿಕ್ಷಕ ರಕ್ಷಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮವು ಜು.15 ರಂದು ಜರಗಿತು.

ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧ.ಮಂ.ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಹಾವೀರ್ ಜೈನ್ ಇವರು ಪಾಲ್ಗೊಂಡರು. ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯೆಯ ಮಹತ್ವದ ಬಗ್ಗೆ ವಿವರಿಸಿದರು.ವಿದ್ಯಾವಂತ ಜಗತ್ತಿನ ಯಾವ ಮೂಲೆಯಲ್ಲಾದರೂ ಗೌರವಿಸಲ್ಪಡುತ್ತಾನೆ, ವಿದ್ಯೆಯನ್ನು ಬಯಸುವವನೇ ನಿಜವಾದ ವಿದ್ಯಾರ್ಥಿ.
ವಿದ್ಯಾರ್ಥಿಗೆ ವಿದ್ಯೆಯ ಜೊತೆಗೆ ಸಂಸ್ಕಾರವೂ ಅಗತ್ಯ.ವಿದ್ಯೆ ಬದುಕಿಗೆ ಅನ್ನವನ್ನು, ಸಂಸ್ಕಾರ ಅರ್ಥವನ್ನು ಕೊಡುತ್ತೆದೆ. ಈ ಕಾರ‍್ಯಕ್ರಮದಲ್ಲಿ ಅನುಗ್ರಹ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ! ಫಾ! ಜೇಮ್ಸ್ ಡಿಸೋಜ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರ‍್ಯೆಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇ! ಫಾ! ವಿಜಯ್ ಲೋಬೋರವರು ಪ್ರಾಸ್ತವಿಕ ಮಾತುಗಳನ್ನಾಡುತ್ತಾ, ಕಾಲೇಜಿನ ಶಿಸ್ತು, ಸಂಯಮ ಹಾಗೂ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.

ಕಾರ್ಯಕ್ರಮದಲ್ಲಿ 2023-24ನೇ ಶೈಕ್ಷಣಿಕ ಸಾಳಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಅಂಟನಿ ಫೆರ್ನಾಂಡೀಸ್, ಕಾಲೇಜು ಆಡಳಿತ ಮಂಡಳಿಯ ಸದಸ್ಯರುಗಳಾದ ಅನಿತಾ ಮೋನಿಸ್, ದಯಾಳ್‌ಬಾಗ್ ಆಶ್ರಮದ ನಿರ್ದೇಸಕರಾದ ರೇ! ಫಾ! ಜೋಯೆಲ್ ಉಪಸ್ಥಿತರಿದ್ದರು.ಶಿಕ್ಷಕ ರಕ್ಷಕ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಹಮ್ಮದ್ ಅಲಿ ಮತ್ತು ಪಿ.ಶ್ರೀಕೃಷ್ಣ ಪ್ರಸಾದ್ ಇವರನ್ನು ನೇಮಿಸಲಾಯಿತು.

ಉಪನ್ಯಾಸಕಿಯಾದ ಗೀತಾ ಜೋಶಿಯವರು ಎಲ್ಲರನ್ನು ಸ್ವಾಗತಿಸಿ, ಬಿ.ಪ್ರಣೀತಾ ಜೈನ್ ರವರು ಅತಿಥಿ ಪರಿಚಯಗೈದರು.ಕುಮಾರಿ ಸ್ವಾತಿ ಪ್ರತಿಭಾ ಪುರಸ್ಕೃತರನ್ನು ಪರಿಚಯಸಿ, ಸತ್ಯವತಿಯವರು ಕಾರ‍್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here