ಬೆಳ್ತಂಗಡಿ: ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಗಮನ ಸ್ವಾಗತ ಕಾರ್ಯಕ್ರಮ

0

ಬೆಳ್ತಂಗಡಿ: ಜು.17ರಂದು ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿ 2023 24ನೇ ಸಾಲಿನ ವಿದ್ಯಾರ್ಥಿಗಳಿಗೆ ಆಗಮನ ಸ್ವಾಗತ ಕಾರ್ಯಕ್ರಮವನ್ನು (ಫ್ರೆಷರ್ಸ್ ಡೇ) ಹಮ್ಮಿಕೊಳ್ಳಲಾಯಿತು.

ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಆಧಾರದಿಂದ ಬರಮಾಡಿಕೊಂಡರು ವಿದ್ಯಾರ್ಥಿಯಾದ ಸುಪ್ರೀತಾ  ರೋಡ್ರಿಗಸ್ ರವರು ನಿರೂಪಿಸಿ, ಅಲ್ಬಿಯರವರು ಸ್ವಾಗತಿಸಿ, ಲೆಸ್ಟನ್ ರೋಡ್ರಿ ಗಸ್ ವಂದಿಸಿದರು.

ಕಿರಿಯ ವಿದ್ಯಾರ್ಥಿಗಳಾದ ಸೆಲ್ವಿ ಮರಿಯ ಹಾಗೂ ವೈಷ್ಣವಿ ಇವರು ತಮ್ಮ ಅನುಭವಗಳನ್ನು ಹಂಚಿಕೊಂಡರು.ಪ್ರಾಂಶುಪಾಲರಾದ ಭಗಿನಿ ಆರೋಗ್ಯ ರವರ ಉಪಸ್ಥಿತಿಯಲ್ಲಿ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು

LEAVE A REPLY

Please enter your comment!
Please enter your name here