ಉಜಿರೆ: ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ(X-Ray) ಯಂತ್ರ ಉದ್ಘಾಟನೆ

0

NABH ಪುರಸ್ಕೃತ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಹೊಸ ಆವಿಷ್ಕಾರದ B.P.L ಕಂಪನಿಯ D.R.-1 Prime ಮಾದರಿಯ ಕ್ಷ-ಕಿರಣ(X-Ray) ಯಂತ್ರವನ್ನು ದಿನಾಂಕ 14.07.2023ರಂದು ದ.ಕ ಜಿಲ್ಲೆಯ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ್ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ದ.ಕ ಜಿಲ್ಲೆಯ ಕೆಲವೇ ಕೆಲವು ಆಸ್ಪತ್ರಗಳಲ್ಲಿ ಮಾತ್ರ ಇಂಥ ಅತ್ಯುತ್ತಮವಾದ ನೂತನ ಆವಿಷ್ಕಾರದ ಯಂತ್ರವನ್ನು ನೋಡಬಹುದಾಗಿದೆ. ಈ ಕ್ಷ-ಕಿರಣ ಯಂತ್ರವು ಎಲುಬುಗಳ ಸೂಕ್ಷ್ಮತಿಸೂಕ್ಷ್ಮ ಬಿರುಕುಗಳನ್ನು ಕೂಡ ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಅವಶ್ಯಕತೆ ಇರುವ ರೋಗಿಗಳ ಚಿಕಿತ್ಸೆಗೆ ತುಂಬಾ ಅನುಕೂಲವಾಗುತ್ತದೆಂದು ಡಾ.ಕಾಮತ್ ರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಜಿರೆಯಂಥ ಹಳ್ಳಿಯ ಈ ಆಸ್ಪತ್ರೆಯಲ್ಲಿ ಇಂತಹ ನೂತನ ಆವಿಷ್ಕಾರದ ಯಂತ್ರವನ್ನು ಅಳವಡಿಸಿದ್ದಕ್ಕಾಗಿ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ರವರನ್ನು ಅಭಿನಂದಿಸಿದರು.

ಡಾ.ಭಾರತೀಯವರು ಹೂಗುಚ್ಛ ನೀಡಿ ಡಾ.ಕಾಮತ್ ರವರನ್ನು ಸ್ವಾಗತಿಸಿದರು. ಡಾ.ಗೋಪಾಲಕೃಷ್ಣರವರು ನೆನಪಿನ ಕಾಣಿಕೆಯನ್ನು ನೀಡುವ ಮೂಲಕ ಡಾ.ಕಾಮತ್ ರವರನ್ನು ಗೌರವಿಸಿಸಿದರು.

ಈ ಸಂಧರ್ಭದಲ್ಲಿ ಬೆನಕ ಆಸ್ಪತ್ರೆಯ ಎಲುಬು, ಕೀಲು ತಜ್ಞರಾದ ಡಾ.ರಜತ್ ಹೆಚ್.ಪಿ ಮತ್ತು ಸ್ತ್ತ್ರೀರೋಗ ತಜ್ಞರಾದ ಡಾ. ಅಂಕಿತ ಜಿ.ಭಟ್ ರವರು ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ರೋಗಿಗಳು, ಅವರ ಸಂಬಂಧಿಕರು  ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ B.P.L ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here