ಧರ್ಮಸ್ಥಳದಲ್ಲಿ ಗೋಸಾಗಾಟ ಪ್ರಕರಣ- ಗೋಸಾಗಾಟಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಅದ್ಯಾವುದೂ ನನ್ನ ವಾಹನಗಳಲ್ಲ ಎಂದು ಗಣೇಶ್ ಗೌಡ ನಾವೂರು ಸ್ಪಷ್ಟನೆ

0

ಧರ್ಮಸ್ಥಳ: ಜು.12ರಂದು ಮೂರು ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟದ ಪ್ರಕರಣ ನಡೆದಿದ್ದು, ಈ ಪ್ರಕರಣದಲ್ಲಿ ಭಾಜಪಾ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಇವರು ಭಾಗಿಯಾಗಿದ್ದಾರೆಂದು ಮತ್ತು ಇವರ ಪಿಕಪ್ ನಲ್ಲಿದ್ದ ಜಾನುವಾರು ಸಹಿತ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.

ಧರ್ಮಸ್ಥಳ ಪೊಲೀಸರು ಗೋಸಾಗಾಟವೊಂದನ್ನು ತಡೆದಿದ್ದು, ಹಾಗೂ ವಾಹನಗಳನ್ನು ವಶಪಡೆಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಿಂದ ನನಗೆ ತಿಳಿದುಬಂದಿರುತ್ತದೆ. ಈ ವಿಷಯದಲ್ಲಿ ಕೆಲವೊಂದು ಜನರು ನನ್ನ ಹೆಸರನ್ನು ತಳುಕುಹಾಕಿದ್ದು ಆ ವಾಹನಗಳು ನನ್ನ ವಾಹನಗಳೆಂದು ಬಿಂಬಿಸಿ ನನ್ನ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ನನಗೆ ತಿಳಿದುಬಂದ ಕಾರಣ ಈ ಹೇಳಿಕೆಯ ಮೂಲಕ ನನ್ನ ಸ್ಪಷ್ಟೀಕರಣ ನೀಡುತಿದ್ದೇನೆ.ಮೇಲ್ಕಂಡ ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ.ವಿನಾಕಾರಣ ನನ್ನ ಹಾಗೂ ನಾನು ಪ್ರತಿನಿಧಿಸುವ ಪಕ್ಷದ ಹೆಸರನ್ನು ಹಾಳು ಮಾಡಲು ಪ್ರಯತ್ನಪಡುತ್ತಿರುವ ಕುತಂತ್ರಿಗಳ ವಿರುದ್ಧ ಶೀಘ್ರ ಕಾನೂನು ಮೊರೆ ಹೋಗಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ, ಎಂದು ಈ ಮೂಲಕ ಗಣೇಶ್ ಗೌಡ ನಾವೂರು ಅವರು ಹೇಳಿಕೆ ನೀಡಿದ್ದಾರೆ.

p>

LEAVE A REPLY

Please enter your comment!
Please enter your name here