ಧರ್ಮಸ್ಥಳ: ಮೂರು ಪಿಕಪ್ ವಾಹನದಲ್ಲಿ ಅಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣವನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಮೂರು ಪಿಕಪ್ ನಲ್ಲಿದ್ದ ಜಾನುವಾರು ಸಹಿತ ನಾಲ್ವರನ್ನು ಬಂಧಿಸಿದ ಘಟನೆ ಜು.12 ರಂದು ವರದಿಯಾಗಿದೆ.
ಚೆನ್ನಕೇಶವ (33 ವ)ಮರವಳಲು ಕಸಬಾ ಹೋಬಳಿ, ಅರಕಲಗೂಡು ಹಾಸನ, ಪುಷ್ಪರಾಜ್ ಒಳಗದ್ದೆ ಮನೆ ನಾವೂರು ಗ್ರಾಮ, ಪ್ರಮೋದ್ ಸಾಲ್ಯಾನ್ ಮೋರ್ತಾಜೆ ಮನೆ ನಾವೂರು ಗ್ರಾಮ, ಸಂದೀಪ್ ಹಿರೇಬೆಳಗುಳಿ ಹಳೇಕೋಟೆ ಹೋಬಳಿ, ಹೊಳೆನರಸೀಪುರ ಇವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಧಮ೯ಸ್ಥಳ ಠಾಣೆಯ ಎಸ್.ಐ ಅನೀಲಕುಮಾರ್ ತಂಡದವರು ಜು.12 ರಂದು ಖಚಿತ ಮಾಹಿತಿಯಂತೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿರವರುಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ರಾತ್ರಿ 8.45 ಗಂಟೆಗೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್ ವಾಹನಗಳಾದ ಕೆಎ-21ಬಿ-7389 ಕೆಎ-70-0312 ಮತ್ತು ಕೆಎ670209 ನೇ ನೋಂದಣಿ ಸಂಖ್ಯೆಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಜಾನುವಾರು ಸಾಗಾಟದ ಪ್ರಕರಣ ಬೆಳಕಿಗೆ ಬಂದಿತ್ತು.
ವಾಹನದಲ್ಲಿ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ವಾಹನದಲ್ಲಿದ್ದ ಚೆನ್ನಕೇಶವ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ವಾಹನ ಸಹಿತ ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡ ಪೊಲೀಸರು ನಾಲ್ವರು ಆಪಾದಿತರುಗಳನ್ನು ತಮ್ಮವಶಕ್ಕೆ ಪಡೆದುಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ ರೂ. 65 ಸಾವಿರ ಹಾಗೂ ವಾಹನದ ಅಂದಾಜು ಮೌಲ್ಯ ರೂ.7 ಲಕ್ಷ ಒಟ್ಟು ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ 7.65 ಲಕ್ಷ ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.