ಉಜಿರೆ ರತ್ನಮಾನಸದಲ್ಲಿ ಭತ್ತದ ಸಸಿಮಡಿ ತಯಾರಿ ಪ್ರಾತ್ಯಕ್ಷಿತೆ

0

ಉಜಿರೆ: ಉಜಿರೆಯ ರತ್ನಮಾನಸ ಜೀವನ-ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಭತ್ತದ ಸಸಿಮಡಿ ತಯಾರಿಯ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಜು.9 ರಂದು ನಡೆಯಿತು.
ಈ ಕಾರ್ಯಕ್ರಮದ ಕುರಿತು ನಿಲಯದ ಪಾಲಕ ಯತೀಶ್ ಕೆ.ರವರು ಭತ್ತದ ಕೃಷಿ ಮಾಡುವ ವಿಧಾನ ಮತ್ತು ಭತ್ತವನ್ನು ಬೀಜ ಬಿತ್ತನೆಯಿಂದ ಕೊಯ್ಲು ಆಗುವವರೆಗಿನ ಎಲ್ಲಾ ರೀತಿಯ ಕೆಲಸ-ಕ್ರಮಗಳನ್ನು ಹೇಗೆ ನಿರ್ವಹಿಸಬೇಕೆಂದು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿ ಸ್ವಾಗತಿಸಿದರು.


ಮುಖ್ಯ ಅಥಿತಿಯಾಗಿ ಉಜಿರೆಯ ಎಸ್.ಡಿ.ಎಂ. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ರವರು “ಹಿಂದಿನ ಕಾಲದಲ್ಲಿ ಭತ್ತದ ಕೃಷಿ ಶ್ರಮದಾಯಕವಾಗಿತ್ತು , ಆದರೆ ಈಗ ಯಂತ್ರಗಳಿಂದ ಬಹಳ ಸುಲಭವಾಗಿದೆ. ನಾವು ಅನ್ನವನ್ನು ಬಿಸಾಡದೆ ತಿಂದರೆ ಅನ್ನದಾತನಿಗೆ ಗೌರವವನ್ನು ನೀಡಿದಂತಾಗುತ್ತದೆ.” ಎಂದು ರೈತನ ಶ್ರಮದ ಮೌಲ್ಯವನ್ನು ನೆನಪಿಸಿಕೊಂಡರು.


ಉಜಿರೆಯ ಸಮಾಜಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತ ಮೋಹನ್ ಶೆಟ್ಟಿಗಾರ್‌ “ಇರುವಂತ ಭೂಮಿಯಲ್ಲಿ ಆದಷ್ಟು ಕೃಷಿಯನ್ನು ಮಾಡಿದರೆ ನಮ್ಮ ಶ್ರಮಕ್ಕೆ ಸಮವಾದ ಬೆಳೆ ಪಡೆಯಬಹುದು ಎಂದು ಹೇಳಿದರು.
ಉಜಿರೆಯ ಎಸ್‌ಡಿಯಂ ರೆಸಿಡೆನ್ಸಿ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ರವರು “ಈಗಿನ ವಿದ್ಯಾರ್ಥಿಗಳು ಕೃಷಿಯಿಂದ ದೂರ ಸರಿಯುತ್ತಿದ್ದಾರೆ, ಕೃಷಿಯ ಪರಿಚಯವು ಕಡಿಮೆಯಾಗಿದೆ. ಇಂತಹ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಜೀವನ-ಶಿಕ್ಷಣವನ್ನು ಕಲಿಯಲು ಸಹಾಯವಾಗುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ನಿಯತಿ ಸಾತ್ವಿಕ್ ಹಾಗೂ ನೀರಚಿಲುಮೆಯ ನರ್ಸರಿ ವಿಭಾಗದ ದಯಾನಂದ ಹಾಗೂ ನಿಲಯದ ಅದ್ಯಾಪಕರಾದ ತಿಭುವನ್ ,ಉದಯ್ ರಾಜ್ ಮತ್ತು ರೆಸಿಡೆನ್ಸಿಯ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ನಿಲಯದ ಅದ್ಯಾಪಕ ರವಿಚಂದ್ರ ಬಿ.ವಂದಿಸಿದರು.

LEAVE A REPLY

Please enter your comment!
Please enter your name here