ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದರಿಂದ ಆರನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ಇಂದು(ಜು.11) ನಡೆಯಿತು.
ಈ ಸಭೆಗೆ ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞೆ ಡಾಕ್ಟರ್ ಅನನ್ಯ ಲಕ್ಷ್ಮಿ ಇವರು ಆಗಮಿಸಿದ್ದರು.ಪೋಷಕರು ಮಗುವಿನ ಕನ್ನಡಿ ಇದ್ದಂತೆ.ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು.ಮಗುವಿನ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಪರಿಹರಿಸಬೇಕು.ಮಗು ಅಮೂಲ್ಯವಾದ ಆಸ್ತಿ,ಅದನ್ನು ಸರಿಯಾಗಿ ಉಳಿಸಿ ಬೆಳೆಸಿ ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡಿಸುವುದು ಎಲ್ಲ ಪೋಷಕರ ಆದ್ಯ ಕರ್ತವ್ಯ.ಅಪ್ಪ, ಅಮ್ಮ, ಮಕ್ಕಳು ಹಾಗೂ ಜೀವನ ಕೌಶಲ್ಯಗಳ ಬಗ್ಗೆ ಹಲವಾರು ಉದಾಹರಣೆಗಳ ಮುಖಾಂತರ ಸ್ವಾರಸ್ಯಕರವಾಗಿ ಅನೇಕ ವಿಚಾರಗಳನ್ನು ತಿಳಿಸಿದರು.
ತದನಂತರ ಶಾಲೆಯ ಹಾಗುಹೋಗುಗಳನ್ನು, ಹೆತ್ತವರ ಕರ್ತವ್ಯವನ್ನು ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಮ್.ವಿ ವಿವರಿಸಿದರು.
ತದನಂತರ ಶಿಕ್ಷಕರು ಹೆತ್ತವರಿಗೆ ತಮ್ಮ ಪರಿಚಯವನ್ನು ತಿಳಿಸಿದರು.ಈ ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕಿ ಗೀತಾ ನಿರೂಪಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಸ್ವಾಗತಿಸಿ, ಭವ್ಯ ಸುರೇಶ್ ಅತಿಥಿಗಳ ಪರಿಚಯ ನೀಡಿ, ಜಯವತಿ ಧನ್ಯವಾದವಿತ್ತರು.