ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ದಯಾನಂದ ಕೋಟ್ಯಾನ್, ಉಪಾಧ್ಯಕ್ಷರಾಗಿ ಭಾಸ್ಕರ ಹೆಗ್ಡೆ

0

ನಾರಾವಿ: ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ನಾರಾವಿ ಇದರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜು.4ರಂದು ನೆರವೇರಿತು.
ಸಂಘದ ನೂತನ ಅಧ್ಯಕ್ಷರಾಗಿ ದಯಾನಂದ ಕೋಟ್ಯಾನ್ , ಉಪಾಧ್ಯಕ್ಷರಾಗಿ ಭಾಸ್ಕರ ಹೆಗ್ಡೆ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಸಿಪ್ರಿಯನ್ ಪಿರೇರಾ, ಮೆಲ್ವಿನ್ ಡಿಸೋಜಾ, ಶೇಖರ್ ಹೆಗ್ಡೆ, ಸುಚೇಂದ್ರ ಜೈನ್, ರಾಘವ ಹೆಗ್ಡೆ, ಸುರೇಖಾ, ಸುನಿಲ್ ಡಿಸೋಜಾ, ವಿಠಲ ಮಲೆಕುಡಿಯ, ವಿನಯ ಲೋಬೊ, ಕಿಟ್ಟು ಮತ್ತು ವಿನೋದ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here