ನಡ ಸ.ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ

0

ನಡ: ನಡ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ಮಕ್ಕಳ ಸ್ವಾಗತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಸಾತ್ವಿಕ ಕುಳಮರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೇಶಸೇವೆಯ ಪವಿತ್ರ ಕೈಂಕರ್ಯ ದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಂಶುಪಾಲ ಚಂದ್ರಶೇಖರ್ ಸಭಾಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಸಾತ್ವಿಕ್ ಕುಳಮರ್ವರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡ ಉಪನ್ಯಾಸಕಿ ಲಿಲ್ಲಿ ಪಿ.ವಿ ಸನ್ಮಾನಿತರ ಪರಿಚಯ ಮಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಜಿತ್ ಆರಿಗ ಅತಿಥಿಗಳಾಗಿ ಭಾಗವಹಿಸಿದ್ದರು.ಆಂಗ್ಲ ಭಾಷಾ ಉಪನ್ಯಾಸಕ ಮೋಹನ ಗೌಡ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ವಸಂತಿ ಪಿ. ಸಂದರ್ಬೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪವಿತ್ರ ಮತ್ತು ಇತಿಹಾಸ ಉಪನ್ಯಾಸಕಿ ಶರ್ಮಿಳಾ ಪಿಂಟೋ ಉಪಸ್ಥಿತರಿದ್ದರು.

ರಾಜ್ಯಶಾಸ್ತ್ರ ಉಪನ್ಯಾಸಕಿ ಶಿಲ್ಪಾ ಡಿ. ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ವಂದನಾ ವಂದಿಸಿದರು. ಕುಮಾರಿಯರಾದ ಸವಿತಾ, ಪ್ರಾಪ್ತಿ, ಯಕ್ಷಿತಾ ಪ್ರಾರ್ಥನೆಗೈದರು.

LEAVE A REPLY

Please enter your comment!
Please enter your name here