

ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ ನ 2023-24 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಸುಸ್ಸಾನ ರವರ ಅಧ್ಯಕ್ಷತೆಯಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜೂ.30ರಂದು ನಡೆಯಿತು.
ನೋಡೆಲ್ ಅಧಿಕಾರಿ ಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಭಾಗವಹಿಸಿ ಗ್ರಾಮ ಸಭೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕರ್ಕೇರಾ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಸ್ ಬೇಬಿ ಸುವರ್ಣ, ಸುಧಾಕರ್ ಆಳ್ವ, ಜಯಂತಿ, ಪುನೀತ್ ಕುಮಾರ್, ಉಮೇಶ್, ಬೇನಡಿಕ್ಟ್ ಮಿರಾಂದ, ಸೆಲೆಸ್ತಿನ್ ಡಿಸೋಜ, ವಸಂತ ಪೂಜಾರಿ, ತುಳಸಿ, ರಾಜೇಶ್, ಐರಿನ್ ಮೊರಾಸ್, ಫರ್ಝಾನ, ವಿದ್ಯಾ ಪಿ. ಸಾಲಿಯಾನ್, ರುಬೀನಾ, ಗುಲಾಬಿ, ದಿನೇಶ್,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಗ್ರಾಮಸ್ಥರು, ಇಲಾಖಾ ಅಧಿಕಾರಿ, ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತರು, ಆರೋಗ್ಯ ಕಾಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಳೆದ ಸಭೆಯ ನಡಾವಳಿ, ವಾರ್ಡ್ ಸಭೆಯ ನಡಾವಳಿ, ಜಮಾಖರ್ಚಿನ ವಿವರ, ವರದಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ಮಂಡಿಸಿದರು.ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಕಾರ್ಯದರ್ಶಿ ಯಶೋಧರ ಶೆಟ್ಟಿ ಸ್ವಾಗತಿಸಿದರು.ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.ಗ್ರಾಮಸ್ಥರು ಉಪಸ್ಥಿತರಿದ್ದು ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಗೆ ನೀರಿನ ಸಮಸ್ಯೆ ಎದುರಾದಾಗ ಏನೂ ಫಲಾಪೇಕ್ಷೆ ಇಲ್ಲದೆ ನೀರು ಸರಬರಾಜು ಮಾಡಿದ ಸೆಲಿನ್ ಡಿಸೋಜ, ಸವಿತಾ, ಜೀವನ್ ವಾಸ್ ಇವರನ್ನು ಸನ್ಮಾನಿಸಲಾಯಿತು.