ಉಜಿರೆ: ಜೂ.29 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರು ಹಾಕಿಕೊಟ್ಟ ಸನ್ಮಾರ್ಗ ಹಾಗೂ ಪ್ರತಿವರ್ಷದಂತೆ ದೇವಸ್ಥಾನ ಹಾಗೂ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ನಡೆದ ಆಷಾಢ ಪ್ರಥಮೈಕಾದಶಿ ಪ್ರಯುಕ್ತ ಸುದರ್ಶನ ಹವನದಲ್ಲಿ ಶ್ರೀ ಮಹಾವಿಷ್ಣುವಿನ ಚಿಹ್ನೆಯಾದ ಶಂಖಚಕ್ರವನ್ನು ಅಭಿಮಂತ್ರಿಸಿ ಭಕ್ತಾದಿಗಳ ತೋಳುಗಳಿಗೆ ಮುದ್ರಾಧಾರಣೆ ಮಾಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಶ್ರೀಗಳವರನ್ನು ಭಕ್ತಿ ಗೌರವದಿಂದ ಸ್ವಾಗತಿಸಿ, ಬರಮಾಡಿಕೊಂಡರು.
ಶ್ರೀಗಳವರು ಶ್ರೀ ಜನಾರ್ದನ ಸ್ವಾಮಿ ಹಾಗೂ ಪರಿವಾರ ದೇವರು ಮತ್ತು ಶ್ರೀ ಮಧ್ವಾಚಾರ್ಯ ಸನ್ನಿಧಿಯ ದರ್ಶನ ಪಡೆದರು.ವೇದಮೂರ್ತಿ ಶ್ರೀಪತಿ ಎಳಚಿತ್ತಾಯರು ಸುದರ್ಶನ ಹೋಮ, ಧಾರ್ಮಿಕ ವಿಧಿ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಪರಾರಿ ವೆಂಕಟ್ರಮಣ ಹೆಬ್ಬಾರ್ ಭಕ್ತಾದಿಗಳ ಮುದ್ರಾಧಾರಣೆಗೆ ವ್ಯವಸ್ಥೆ ಮಾಡಿದರು .ತಾಲೂಕಿನ ಸುಮಾರು 500ಕ್ಕೂ ಹೆಚ್ಚು ಭಕ್ತಾದಿಗಳು ಜಾತಿ,ಮತ ಭೇದವಿಲ್ಲದೆ ಶ್ರೀಗಳವರಿಂದ ಮುದ್ರಾಧಾರಣೆ ಹಾಕಿಸಿಕೊಂಡರು.