ಉಜಿರೆ: ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಜೂ.25 ರಂದು ಚುನಾವಣೆ ನಿಗದಿಯಾಗಿದ್ದು ಒಟ್ಟು ಎಲ್ಲಾ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ 7 ಸ್ಥಾನಕ್ಕೆ ಸುರೇಶ್ ಗೌಡ ಕೂಡಿಗೆ, ವಿಜಯ ಪೂಜಾರಿ ಪಾದೆ, ಕೇಶವ ಗೌಡ ಕೋರಿಯರು, ಸತೀಶ್ ಕೆ. ಕದಂಬಾರು, ಸಂತೋಷ್ ಎಂ. ಚಾವಡಿ, ಅನಿಲ್ ಡಿಸೋಜ ಮಾಚಾರು, ನಾಗವೇಣಿ ಮಾಚಾರು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕಿಟ್ಟ ಮಾಚಾರು,ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಬೇಬಿ ಮಾಚಾರು,ಹಿಂದಿಳಿದ ವರ್ಗ ಎ. ವರ್ಗದಿಂದ ಕೇಶವ ಪಾದೆ, ಹಿಂದುಳಿದ ವರ್ಗ ಬಿ. ವರ್ಗದಿಂದ ಪುರುಷೋತ್ತಮ ಬಿ.ಎಸ್. ಮಾಚಾರು , 2 ಸ್ಥಾನ ಮಹಿಳಾ ಮೀಸಲು ಕ್ಷೇತ್ರದಿಂದ ಜಯಶ್ರೀ ಪ್ರಕಾಶ್ ಅಪ್ರಮೇಯ, ಶಶಿಕಲಾ ಸಾಯಿಕೃಪಾ ಇವರು ಆಯ್ಕೆಯಾದರು. ಜೂ.28 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಹಾಲಿ ಅಧ್ಯಕ್ಷ ಸುರೇಶ ಗೌಡ ಕೆ., ಮತ್ತು ಉಪಾಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ವಿಜಯ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ನಿರ್ವಹಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಲತಾ ಮತ್ತು ಸಿಬ್ಬಂದಿಗಳು ಸಹಕರಿಸಿದರು.