ಉಜಿರೆ: ಸುಪ್ರೀಮ್ ಆಟೋ ಡೀಲರ್ಸ್ ಪ್ರೈ.ಲಿ ಇವರ ವತಿಯಿಂದ ಬೃಹತ್ ವಾಹನ ತಪಾಸಣಾ ಶಿಬಿರ ಉಜಿರೆಯ ಸೀತಾರಾಮ ಕಲಾಮಂದಿರದಲ್ಲಿ ಜೂ.23 ಮತ್ತು 24ರಂದು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಉಜಿರೆಯ ಬೆನಕ ಆಸ್ಪತ್ರೆಯ ವತಿಯಿಂದ ಆಟೋ ಚಾಲಕರು ಮತ್ತು ಮಾಲಕರಿಗೆ ಉಚಿತವಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.
ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರ ತಪಾಸಣೆಗಳನ್ನು ಡಾll ಮರಿಯಾ ತೋಮಸ್ ಇವರು ನಡೆಸಿ, ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು. ಸಿಸ್ಟರ್ ಶಿಲ್ಪಾ.ಯಂ.ಸ್ ಇವರು ಸಹಕರಿಸಿದರು.
ಇದರ ಮೇಲುಸ್ತುವಾರಿಯನ್ನು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ ಭಟ್ ನಿರ್ವಹಿಸಿದರು.
p>