ಪಿಲ್ಯ: ಗುಡ್ ಫ್ಯೂಚರ್ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

0

ಪಿಲ್ಯ: ಗುಡ್ ಫ್ಯೂಚರ್ ಶಾಲೆ ಪಿಲ್ಯ ಇಲ್ಲಿ ಜೂ.26ರಂದು 2023-24ನೇ ಸಾಲಿನ ಮೊದಲ ಶಿಕ್ಷಕ-ರಕ್ಷಕ ಸಂಘದ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರು ವಹಿಸಿಕೊಂಡು ವಿದ್ಯಾರ್ಥಿಗಳನ್ನುಪ್ರೀತಿ ವಿಶ್ವಾಸದಿಂದ ಕಂಡು ಸ್ನೇಹಮಯಿಯಾಗಿ ಶಿಕ್ಷಕರ ಕರ್ತವ್ಯ ನಿರ್ವಹಿಸಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಾಜಿ ಕುರಿಯನ್ ರವರು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಪ್ರೇರೇಪಿಸುವಂತೆ ಸಲಹೆ ನೀಡಿದರು.ಸಮಿತಿಯ ಉಪಾಧ್ಯಕ್ಷ ವೀರೇಂದ್ರ ಜೈನ್ ರವರು ಮಾತನಾಡಿ ಆಸಕ್ತ ವಿಧ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಮಧ್ಯಾಹ್ನದ ಉಪಹಾರ ನೀಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಅಂತಿಮಗೊಳಿಸಲಾಯಿತು.ಆ ನಂತರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ ಕೃಷ್ಣ ಕುಮಾರ್ ರವರು ಪ್ರಾಸ್ತಾವಿಕ ಮಾತನಾಡಿ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಪಠೈತರ ಚಟುವಟಿಕೆಗಳ ಬಗೆಗೆ ಮಾಹಿತಿ ನೀಡಿದರು.ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆಗಳ ಬಗ್ಗೆ ತಿಳಿಸಿದರು.

ತದನಂತರ ಪೋಷಕರೊಂದಿಗೆ ಶೈಕ್ಷಣಿಕ ವಿಷಯಗಳ ಬಗೆಗೆ ಚರ್ಚೆ ನಡೆಯಿತು.ಸಂಸ್ಥೆ ಗೆ ನೂತನವಾಗಿ ಬಂದ ಶಿಕ್ಷಕರ ಪರಿಚಯ ಮಾಡಿಕೊಡಲಾಯಿತು.

ಸಹಶಿಕ್ಷಕಿ ಸಮೀಕ್ಷಾ ಸಾಗತಿಸಿ , ಸೌಜನ್ಯ ಧನ್ಯವಾದ ಸಮರ್ಪಿಸಿದರು.ಸಹಶಿಕ್ಷಕಿ ಲಕ್ಷೀ ಯವರು ಕಾರ್ಯಕ್ರಮವನ್ನುನಿರೂಪಿಸಿದರು.

LEAVE A REPLY

Please enter your comment!
Please enter your name here