ಪಿಲ್ಯ: ಗುಡ್ ಫ್ಯೂಚರ್ ಶಾಲಾ ಮಂತ್ರಿಮಂಡಲ ರಚನೆ

0

ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ 2023-24 ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲ ರಚನೆ ಜೂ.21 ರಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ನಾಯಕತ್ವ ಗುಣ ಬೆಳೆಸಲು ವಿದ್ಯಾರ್ಥಿ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚನೆ ಮಾಡಲಾಯಿತು.
ಮುಖ್ಯಮಂತ್ರಿಯಾಗಿ 10 ನೇ ತರಗತಿಯ ಮುಶ್ರಿಫ್, ಉಪಮುಖ್ಯಮಂತ್ರಿಯಾಗಿ 9 ನೇ ತರಗತಿಯ ಆಶೀರ್, ಶಿಕ್ಷಣ ಮಂತ್ರಿಯಾಗಿ 10 ನೇ ತರಗತಿಯ ಅಕ್ಷತಾ, ಉಪಶಿಕ್ಷಣ ಮಂತ್ರಿಯಾಗಿ 9 ನೇ ತರಗತಿಯ ದಿತೀಕ್ಷ್, ಕ್ರೀಡಾ ಮಂತ್ರಿಯಾಗಿ 9 ನೇ ತರಗತಿಯ ಶೆರ್ವಿನ್, ಉಪಕ್ರೀಡಾ ಮಂತ್ರಿಯಾಗಿ 10 ನೇ ತರಗತಿಯ ರಮಿಝ, ಸ್ವಚ್ಛತಾ ಮಂತ್ರಿಯಾಗಿ 10 ನೇ ತರಗತಿಯ ತಸ್ರಿಯ, ಉಪ ಸ್ವಚ್ಛತಾ ಮಂತ್ರಿಯಾಗಿ 9 ನೇ ತರಗತಿಯ ದೀಪೇಶ್, ಶಿಸ್ತು ಮಂತ್ರಿಯಾಗಿ 10 ನೇ ತರಗತಿಯ ಸಂಜನ, ಉಪ ಶಿಸ್ತು ಮಂತ್ರಿಯಾಗಿ 6 ನೇ ತರಗತಿಯ ವಿಶಾನ್ ಮತ್ತು 7 ನೇ ತರಗತಿಯ ಪವಾದ್ , ಆರೋಗ್ಯ ಮಂತ್ರಿಯಾಗಿ 9 ನೇ ತರಗತಿಯ ಫಾವಾಝ್ , ಉಪ ಆರೋಗ್ಯ ಮಂತ್ರಿಯಾಗಿ 8 ನೇ ತರಗತಿಯ ನುಮಸಾರ ಮತ್ತು 8 ನೇ ತರಗತಿಯ ಅಸ್ಮರ್, ಸಾಂಸ್ಕೃತಿಕ ಮಂತ್ರಿಯಾಗಿ 9 ನೇ ತರಗತಿಯ ಆದ್ಯಾ, ಉಪ ಸಾಂಸ್ಕೃತಿಕ ಮಂತ್ರಿಯಾಗಿ 10 ನೇ ತರಗತಿಯ ಸಂಚಿತ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆಗೆ ವಿವಿಧ ಮಂತ್ರಿಗಳು ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಕೃಷ್ಣ ಕುಮಾರ್ ರವರ ಮಾರ್ಗದರ್ಶನದೊಂದಿಗೆ ಶಾಲಾ ಸಂಚಾಲಕರಾದ ನಸೀರ್ ಅಹಮದ್ ಖಾನ್ ರವರ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here