ನಿಟ್ಟಡೆ ಸ.ಉ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ ಮತ್ತು ಶಾಲಾ ಸಂಘಗಳ ಉದ್ಘಾಟನೆ

0

ನಿಟ್ಟಡೆ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆಯಲ್ಲಿ ಪೋಷಕರ ಸಭೆ ಜೂ.24 ರಂದು ಜರಗಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಉದ್ಘಾಟಿಸಿ ಶಾಲೆ ಮತ್ತು ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು. ಶಾಲೆಯ ಸಂಘಗಳಿಗೆ ಆಯ್ಕೆಯಾದ ನಾಯಕರುಗಳಿಗೆ ತನ್ನ ನಾಯಕ ಸೇವೆಯ ಮುಖಾಂತರ ಗುರುತಿಸಿಕೊಳ್ಳಬೇಕು ನಾಯಕ ಯಾವತ್ತೂ ಭ್ರಮೆಯಲ್ಲಿ ಇರಬಾರದು, ನಾಯಕನಿಗೆ ಯಾವತ್ತು ದೂರ ದೃಷ್ಟಿ ಇರಬೇಕು ನಾಯಕರುಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಬೇಕು ಮಾನವೀಯ ಸಂಬಂಧಗಳನ್ನು ನಾಯಕರು ಬೆಳೆಸಿಕೊಳ್ಳಬೇಕು, ಶಾಲಾ ಸಂಘಗಳ ಜವಾಬ್ದಾರಿಗಳನ್ನು ಶಿಕ್ಷಕರ ಮಾರ್ಗದರ್ಶನದಿಂದ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.


ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಆರತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ತಾಯಂದಿರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪೋಷಕರು,ಶಿಕ್ಷಕರು ಉಪಸ್ಥಿತರಿದ್ದರು.

ರಜನಿ ನಿರೂಪಿಸಿ, ಮಾಲತಿ ವಂದಿಸಿದರು.

p>

LEAVE A REPLY

Please enter your comment!
Please enter your name here