ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ಅಪರಿಚಿತ ಶವ ಪತ್ತೆ

0

ಧರ್ಮಸ್ಥಳ: ನೇತ್ರಾವತಿ ಸಾನಘಟ್ಟದಲ್ಲಿ ಅಪರಿಚಿತ ಶವ ಒಂದು ಪತ್ತೆಯಾದ ಘಟನೆ ಇಂದು (ಜೂ.26) ಬೆಳಗ್ಗೆ ನಡೆದಿದೆ. ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ಸ್ನಾನ ಮಾಡುತ್ತಿರುವ ವೇಳೆಯಲ್ಲಿ ನೀರಿನಲ್ಲಿ ತೇಲಿಕೊಂಡು ಇರುವುದನ್ನು ಕಂಡು ಕ್ಷೇತ್ರದ ಕ್ಷೇತ್ರದ ಮಾಹಿತಿ ಕಚೇರಿಗೆ ತಿಳಿಸಿದ್ದಾರೆ
ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಶವವನ್ನು ನೀರಿನಿಂದ ಮೇಲೆ ತೆಗೆದು ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೇಲ್ನೋಟಕ್ಕೆ ಸಾವು ನೀರಿಗೆ ಬಿದ್ದು ಹಲವು ದಿನಗಳು ಆಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here