ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಕಿಟ್ಟ ಅಲಿಯಾಸ್ ಕೃಷ್ಣ ಡಿ ಎಂಬಾತನಿಂದ ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆಗೊಳಗಾದ ದಿನೇಶ್ ನಾಯ್ಕ್ ಇವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಪತ್ರ ಬರೆದಿದ್ದಾರೆ.
ಮೃತ ದಿನೇಶ್ ನಾಯ್ಕ್ ಇವರ ಕುಟುಂಬದ ಪರಿಸ್ಥಿತಿ ಆರ್ಥಿಕವಾಗಿ ಚಿಂತಾಜನಕವಾಗಿದೆ.ಈ ಕುಟುಂಬವು ದ.ಕ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮರಾಠಿ ನಾಯ್ಕ ಜಾತಿಗೆ ಸೇರಿದವರಾಗಿರುತ್ತಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಓರ್ವ ಪುತ್ರನಿದ್ದು ಮೃತರ ತಾಯಿ ಸಣ್ಣ ಗೂಡಂಗಡಿಯನ್ನು ಇಟ್ಟುಕೊಂಡು ಸಂಸಾರವನ್ನು ನಿಭಾಯಿಸುತ್ತಿದ್ದಾರೆ. ತಾವು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಇವರ ಮನೆಗೆ ಬಂದು ಸಾಂತ್ವಾನ ಹೇಳಿ ಆರ್ಥಿಕ ಸಹಾಯ ನೀಡಿರುತ್ತೀರಿ. ಈಗಾಗಲೇ ದ.ಕ ಜಿಲ್ಲಾ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಕೋಮು ವೈಷಮ್ಯಕ್ಕೆ ಒಳಗಾದ ಕುಟುಂಬಗಳಿಗೆ 25 ಲಕ್ಷ ಸಹಾಯಧನ ನೀಡಿರಿವುದಲ್ಲದೆ ಕುಟುಂಬದ ಓರ್ವ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡುವ ಘೋಷಣೆ ಮಾಡಿರುತ್ತೀರಿ, ಇದೇ ಮಾನದಂಡದ ಆಧಾರದಲ್ಲಿ ದಿನೇಶ್ ನಾಯ್ಕ್ ರ ಕುಟುಂಬಕ್ಕೂ ಪರಿಹಾರವನ್ನು ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.