ಕಾಜೂರು ಡೆವಲಪ್ಮೆಂಟ್ ಸಮಿತಿ(ಕೆಡಿಸಿ ಸೌದಿ ಅರೇಬಿಯಾ) ನೂತನ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ: ಕಾಜೂರು ಡೆವಲಪ್ಮೆಂಟ್ ಸಮಿತಿ (ಕೆಡಿಸಿ) ಸೌದಿ ಅರೇಬಿಯಾ ಇದರ ಮಹಾ ಸಭೆಯು ಇತ್ತೀಚೆಗೆ ಅಂತರ್ಜಾಲದ ಮೂಲಕ ನಡೆಯಿತು. ಅಧ್ಯಕ್ಷತೆಯನ್ನು ಕೆ.ಯು ಮುಹಮ್ಮದ್ ಸಖಾಫಿ ಕಾಜೂರು ವಹಿಸಿದ್ದರು.ಉದ್ಘಾಟನೆಯನ್ನು ದಾಯೀ ಉಸ್ತಾದ್ ಹನೀಫ್ ಕಾಶೀಮಿ ನೆರೆವೆರೀಸಿದರು.ಈ ವೇಳೆ ಜಮಾಲ್ ಕೆ.ಎಮ್ ಅವರು ವೀಕ್ಷಕರಾಗಿ ನೂತನ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಸಲಹೆಗಾರರಾಗಿ ಮುಹಮ್ಮದ್ ಸಖಾಫಿ ಕಾಜೂರು, ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಕೆ ಎಂ, ಕೋಶಾಧಿಕಾರಿಯಾಗಿ ಸಿದ್ಧೀಕ್ ಪಿ.ಎ ಇವರುಗಳನ್ನು ಪೂರ್ಣ ಬಹುಮತದ ಮೇರೆಗೆ ಆರಿಸಲಾಯಿತು.

ಕಳೆದ ಸಾಲಿನ ಪ್ರಧಾನ ಕಾರ್ಯದರ್ಶಿ ಖಲೀಲ್ ಕೆ ಎಂ 2022-23 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಕೆಡಿಸಿ ಸಮಿತಿ ಆಡಳಿತ ಸಾಲಿನ ಅಧ್ಯಕ್ಷರಾಗಿದ್ದ ಹನೀಫ್ ಉಪಸ್ಥಿತರಿದ್ದರು. ಇಬ್ರಾಹಿಂ ಇಬ್ಬಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here