ಬೆಳಾಲು ಪ್ರೌಢಶಾಲೆ ಭಿತ್ತಿಪತ್ರಿಕೆಗಳ ಆರಂಭ

0

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 2023 – 24 ನೇ ಶೈಕ್ಷಣಿಕ ವರ್ಷದ ಕ್ರೀಡೆ ಮತ್ತು ತರಗತಿವಾರು ಭಿತ್ತಿಪತ್ರಿಕೆಗಳು ಆರಂಭವಾಯಿತು.

ಮಕ್ಕಳ ಪ್ರತಿಭಾ ವಿಕಾಸ ವೇದಿಕೆಯಾಗಿರುವ ಭಿತ್ತಿಪತ್ರಿಕೆಗಳನ್ನು ಬೆಳಾಲು ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ನಾರಾಯಣ ಎಳ್ಳುಗದ್ದೆಯವರು ಅನಾವರಣಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಭಿತ್ತಿಪತ್ರಿಕಗಳು ಶಾಲೆಯ ಕನ್ನಡ ಶಿಕ್ಷಕರಾದ ಸುಮನ್ ಯು ಎಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರು ಮಾಡಿದ್ದರು. ವಿದ್ಯಾರ್ಥಿನಿ ಕು. ಸುಕನ್ಯಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here