ಬಂದಾರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆಯಲ್ಲಿ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ರಚಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ಕು.ಶ್ರಾವ್ಯ (7ನೇ) ಮತ್ತು ಶಾಲಾ ಉಪಮುಖ್ಯಮಂತ್ರಿಯಾಗಿ ಕು.ಸುಭಿಕ್ಷಾ(7ನೇ) ಆಯ್ಕೆಯಾದರು.ಉಳಿದಂತೆ ವಿದ್ಯಾಮಂತ್ರಿಯಾಗಿ ಪೂರ್ವಿತ್(7ನೇ), ಕೃಷಿ ಮಂತ್ರಿಯಾಗಿ ಪ್ರಣತ್(7ನೇ), ಕ್ರೀಡಾ ಮಂತ್ರಿಯಾಗಿ ಸೃಜನ್(7ನೇ), ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಿತಾ(6ನೇ), ಆರೋಗ್ಯ ಮಂತ್ರಿಯಾಗಿ ಗಣೇಶ (7ನೇ), ವಾರ್ತಾ ಮಂತ್ರಿಯಾಗಿ ಚರಣ್(6ನೇ), ನೀರಾವರಿ ಮಂತ್ರಿಯಾಗಿ ಚಕ್ರೇಶ್ (6ನೇ) ಹಾಗೂ ಸ್ಪೀಕರ್ ಆಗಿ ನಿಶ್ಮಿತಾ (7ನೇ) ಆಯ್ಕೆಯಾದರು.
ಶಾಲಾ ಶಿಕ್ಷಕ ವೃಂದದವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
p>