ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ

0

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಕಾಲೇಜು ನಿಟ್ಟಡೆ-ವೇಣೂರು ಇಲ್ಲಿ ದಿನಾಂಕ 21-06-2023 ಬುಧವಾರದಂದು ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂಧರ್ಭ ಕುಂಭಶ್ರೀ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ.ಹೆಚ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ವಿನಯ್ ನಡೆಸಿಕೊಟ್ಟರೆ, ಮುಖ್ಯ ಶಿಕ್ಷಕಿ ಉಷಾ.ಜಿ ಯೋಗ ದಿನದ ಮಹತ್ವವನ್ನು ತಿಳಿಸಿದರು.ಆಂಗ್ಲ ಭಾಷಾ ಉಪನ್ಯಾಸಕಿ ಸ್ವರ್ಣಲತ ವಿದ್ಯಾರ್ಥಿಗಳಿಗೆ ಯೋಗವನ್ನು ಹೇಳಿಕೊಟ್ಟರು.

ಕಾಲೇಜಿನ ಸಿ.ಇ.ಒ ಅಶ್ವಿತ್ ಕುಲಾಲ್, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸಿದರು.

LEAVE A REPLY

Please enter your comment!
Please enter your name here