


ಬೆಳ್ತಂಗಡಿ: ಜೂ.21ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ ರೋವರ್ ರೇಂಜರ್ಸ್, ಯುವರ್ ರೆಡ್ ಕ್ರಾಸ್ ಘಟಕ, ಎನ್‌ಸಿಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಸುಬ್ರಹ್ಮಣ್ಯ ಕೆ. ಇವರು ಯೋಗ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು ಹಾಗೂ ಯೋಗ ಮಾಡುವುದರಿಂದ ಆಗುವ ದೈಹಿಕ ಮತ್ತು ಮಾನಸಿಕ ಅನುಕೂಲತೆಗಳ ಬಗ್ಗೆ ತಿಳಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಎನ್ ಸಿ ಸಿ ನೇವಿ ಘಟಕದ ಲೆಫ್ಟಿನೆಂಟ್ ಡಾಕ್ಟರ್ ಶೈಲೇಶ್ ಕುಮಾರ್ ಡಿಹೆಚ್ ಹಾಗೂ ಅಂತಿಮ ಸ್ನಾತಕೋತ್ತರ ವಿಭಾಗದ ಕುಮಾರಿ ಲತಾ ಇವರು ಯೋಗಾಸನದ ಪ್ರಾತ್ಯಕ್ಷಿಕತೆ ಮಾಡಿ ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಮಾಡಿಸಿದರು.
ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ರವಿ ಎಮ್ ಎನ್ ಸ್ವಾಗತಿಸಿದರು.ರೇಂಜಸ್ ಲೀಡರ್ ಪ್ರೊಫೆಸರ್ ರಾಜೇಶ್ವರಿ ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಭಾಗದ ಎಲ್ಲ ವಿದ್ಯಾರ್ಥಿಗಳು ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರು ಸಕ್ರಿಯವಾಗಿ ಭಾಗವಹಿಸಿದರು.