ಗರ್ಡಾಡಿ:ಬಸ್ ಮತ್ತು ಬೈಕ್ ಡಿಕ್ಕಿ: ಓಡೀಲು ನಿವಾಸಿ, ಐಟಿಐ ವಿದ್ಯಾರ್ಥಿ ದೀಕ್ಷಿತ್ ಸಾವು

0

ಗರ್ಡಾಡಿ: ಬೆಳ್ತಂಗಡಿ- ಮೂಡಬಿದ್ರೆ ಹೆದ್ದಾರಿ ನಂದಿಬೆಟ್ಟ ಸಮೀಪ ಸರಕಾರಿ ಬಸ್ ಹಾಗೂ ಬೈಕ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಓಡೀಲು ನಿವಾಸಿ, ಐಟಿಐ ವಿದ್ಯಾರ್ಥಿ ದೀಕ್ಷಿತ್(20ವ) ಬಲಿಯಾದ ಘಟನೆ ಜೂ.21(ಇಂದು) ಬೆಳಿಗ್ಗೆ ನಡೆದಿದೆ.

ಇಂದು ದೀಕ್ಷಿತ್ ಅವರ ಹುಟ್ಟುಹಬ್ಬವಾಗಿದ್ದರಿಂದ ಬೆಳಿಗ್ಗೆ ಬೇಗ ವೇಣೂರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಹಿಂದೆ ಬರುವಾಗ ಈ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here