

ಪುಂಜಾಲಕಟ್ಟೆ: ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 24 ಪ್ರಾಯದ ಲಾಜರ್ ಎಂಬವರು ಜೂ.13 ರಂದು ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯಿಂದ ಹೊರಗೆ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಕನ್ನಡ, ತುಳು, ತಮಿಳು ಭಾಷಾ ಜ್ಞಾನವಿದ್ದು ಮನೆಯಿಂದ ಹೋಗುವ ಸಮಯ ನೀಲಿ ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರೆಂದು ಅವರ ತಾಯಿ ಬಿಜ್ಜು ಬೆರ್ಕಳರವರು ಪುಂಜಾಲಕಟ್ಟೆ ಪೋಲಿಸ್ ಠಾಣೆ ದೂರು ನೀಡಿದ್ದಾರೆ.