

ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಸಕರ ಅನುದಾನದಲ್ಲಿ ಸುಮಾರು 25ಲಕ್ಷದಲ್ಲಿ ನಿರ್ಮಿಸಿದ ಕಾನ್ವೆಂಟ್ ರಸ್ತೆಯನ್ನು (ಕಕ್ಕೆರೆಕಾಡು ರಸ್ತೆ) ಇಂದು (ಜೂ.20) ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಬಿ., ಗ್ರಾಮ ಪಂಚಾಯತ್ ಸದಸ್ಯರುಗಳಾದ ಕಿಶೋರ್ ಕುಮಾರ್ ಶೆಟ್ಟಿ, ವಿಶ್ವನಾಥ್ ಪೂಜಾರಿ, ಉಮೇಶ್ ಸುವರ್ಣ, ರಾಜೀವ ಪೂಜಾರಿ, ರೂಪ, ಮೋಹಿನಿ, ಶೀಲಾವತಿ, ಹರೀಶ್ ಶೆಟ್ಟಿ ಪದೆಂಜಿಲ, ಅನೀಫ್, ಅಗ್ನೆಸ್ ಮೋನಿಸ್, ಮಾಜಿ ತಾ.ಪo ಸದಸ್ಯೆ ವಸಂತಿ ಲಕ್ಷ್ಮಣ ಕುಲಾಲ್, ಗುತ್ತಿಗೆದಾರ ಪ್ರಶಾಂತ್.ಎಂ ಪಾರೆಂಕಿ, ರತ್ನಾಕರ ಶೆಟ್ಟಿ, ರವಿ ಅಧಿಕಾರಿ, ನವೀನ್ ಕೊಡ್ಲಕ್ಕೆ, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.