ಅಕ್ಕಿ ವಿತರಣೆ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಬಟ್ಟಲು ಬಡಿದು ಕಾಂಗ್ರೆಸ್ ಪ್ರತಿಭಟನೆ- ತಹಶೀಲ್ದಾರ್ ಅನುಪಸ್ಥಿತಿಗೆ ಗರಂ ಆದ ವಸಂತ ಬಂಗೇರ

0

ಬೆಳ್ತಂಗಡಿ: ಅಕ್ಕಿ‌ ವಿತರಿಸುವುದನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಜೂನ್ 20ರಂದು ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿಯಲ್ಲಿ‌ ಬಟ್ಟಲು ಬಡಿದು ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ವಿಧಾನಭಾ ಚುನಾವಣೆ‌ಯ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಈ‌ ನಿಟ್ಟಿನಲ್ಲಿ ಈಗಾಗಲೇ ಮೂರು ಗ್ಯಾರಂಟಿಗಳು ಜಾರಿಯಾಗಿದೆ. ಈ‌‌ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಬಡವರಿಗೆ ಉಚಿತ ಅಕ್ಕಿ‌ ನೀಡುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಇದರಿಂದ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ಖರೀದಿಸುವುದಾಗಿ ಸರಕಾರ ಹೇಳಿತ್ತು. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ವಿಶೇಷವಾಗಿ ಬಟ್ಟಲು ಬಡಿಯುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರಾರಂಭದಲ್ಲಿ ಆಹಾರ ನಿಗಮ ರಾಜ್ಯಕ್ಕೆ ಅಕ್ಕಿ ನೀಡುತ್ತೇವೆ ಎಂಬ ಭರವಸೆ ನೀಡಿತ್ತು. ಬಳಿಕ ಅಕ್ಕಿ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಪ್ರತಿಭಟನೆಯಲ್ಲಿ‌ ಆರೋಪಿಸಿದರು. ಇದು ಕೇಂದ್ರ ಸರಕಾರದ ತಾರತಮ್ಯ ನೀತಿಯಾಗಿದೆ. ಏನೇ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಡವರಿಗೆ ಅಕ್ಕಿ ನೀಡಿಯೇ ನೀಡುತ್ತಾರೆ ಎಂದು ವಸಂತ ಬಂಗೇರ ಹೇಳಿದರು. ಬಳಿಕ ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ನೀಡಲಾಯಿತು.

ತಹಶೀಲ್ದಾರ್ ಅನುಪಸ್ಥಿತಿಗೆ ವಸಂತ ‌ಬಂಗೇರ ಗರಂ: ದಲ್ಲಾಳಿಗಳನ್ನು ಹೊರಗೆ ಹಾಕಿಸಲು ಎಚ್ಚರಿಕೆ
ಮನವಿ ಸಲ್ಲಿಸುವ ವೇಳೆ ತಹಶಿಲ್ದಾರ್ ಅವರು ಕಛೇರಿಯಲ್ಲಿ‌ ಇರಲಿಲ್ಲ. ಅವರು ಮಂಗಳೂರಿಗೆ ತೆರಳಿದ್ದರು.‌ಇದಕ್ಕೆ ಮಾಜಿ ಶಾಸಕ ವಸಂತ ಬಂಗೇರ ಗರಂ ಆದರು. ತಹಶೀಲ್ದಾರ್ ಸುರೇಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನೆಯ ವಿಷಯ ತಿಳಿದಿದ್ದರೂ ನೀವು ಕಛೇರಿಯಲ್ಲಿ ಇಲ್ಲ. ಬಿಜೆಪಿ ಪರವಾಗಿ ಕೆಲಸ ಮಾಡಬೇಡಿ ಈಗ ಕಾಂಗ್ರೆಸ್ ಸರ್ಕಾರವಿದೆ ಎಂದು ಎಚ್ಚರಿಕೆ ನೀಡಿದರು. ಮುಂದಿನ‌ ದಿನಗಳಲ್ಲಿ ತಾಲೂಕು ಅಫೀಸ್ ಗೆ ಭೇಟಿ ‌ನೀಡುತ್ತೇನೆ ಎಲ್ಲಾ ವ್ಯವಸ್ಥೆಗಳನ್ನು ಸರಿ ಮಾಡಿ ದಲ್ಲಾಳಿಗಳನ್ನು‌ ಹೊರಗೆ ಹಾಕಿ ಎಂದು‌ ಬಂಗೇರ ಎಚ್ಚರಿಸಿದರು.
ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಮಿತಾ ಪೂಜಾರಿ, ಹಿರಿಯರಾದ ರಾಜು ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ, ರವೀಂದ್ರ ಪೂಜಾರಿ, ನಾಗೇಶ್ ಕುಮಾರ್, ವಂದನಾ ಭಂಡಾರಿ, ತಣ್ಣೀರುಪಂಥ ಗ್ರಾ.ಪಂ.ಉಪಾಧ್ಯಕ್ಷ ಅಯೂಬು ಹಾಗೂ ಎಲ್ಲಾ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here